Monday, November 18, 2024

ಮುಖ, ಕುತ್ತಿಗೆ, ಕೈ ಚರ್ಮಗಳಲ್ಲಿ ನರಹುಲಿ ಸಮಸ್ಯೆ ಹಾಗಿದ್ದಲ್ಲಿ ಈ ಮನೆಮದ್ದು ಟ್ರೈ ಮಾಡಬಹುದು

ನರಹುಲಿ ಮೂಡಿ ಬರಲು ಪ್ರಮುಖ ಕಾರಣ ಪ್ಯಾಪಿಲೋಮಾ ವೈರಸ್​. ಒಂದು ಹಂತದ ವರೆಗೆ ಇದರ ಬಾಧೆ ಸಹಿಸಿಕೊಂಡ್ರು ಸಹ ಕಾಲಕ್ರಮೇಣ ಇರಿಟೇಷನ್​ ಮಾಡುವುದು ಖಂಡತ. ಹೀಗಾಗಿ ನಿರ್ಲಕ್ಷ್ಯ ಮಾಡದೇ ಪರಿಹಾರ ಕಂಡುಕೊಳ್ಳುವುದು ಸೂಕ್ತ ಜೊತೆ ಚರ್ಮದ ಆರೋಗ್ಯದ ದೃಷ್ಠಿಯಿಂದ ಉತ್ತಮ.

ಈಗ ತಿಳಿಸುವ ಮನೆ ಮದ್ದು ತಕ್ಷಣವೇ ಕೆಲಸ ಮಾಡದಿದ್ದರೂ, ನಿರಂತರ ಪ್ರಯತ್ನದಿಂದ ಖಂಡಿತವಾಗಿಯೂ ಸಮಸ್ಯೆಗೆ ಪರಿಹಾರ ನೀಡುತ್ತದೆ. ನಿಮ್ಮ ನಿರಂತರ ಪ್ರಯತ್ನ ಬಹಳ ಮುಖ್ಯವಾಗಿರುತ್ತದೆ. ತಕ್ಷಣಕ್ಕೆ ಫಲಿತಾಂಶ ಬರುವುದಿಲ್ಲ.

1. ಬಾಳೆ ಹಣ್ಣಿನ ಸಿಪ್ಪೆ : ಬಾಳೆಹಣ್ಣಿನ ಸಿಪ್ಪೆಯೂ ನರಹುಲಿ ಒಳಗಿಸಲು ಸಹಾಯ ಮಾಡುತ್ತದೆ ಹೀಗಾಗಿ ಈ ಹಣ್ಣಿನ ಸಿಪ್ಪೆಯನ್ನ ನರಹುಲಿ ಇರುವ ಜಾಗಕ್ಕೆ ಹಾಕಿ ಬಟ್ಟೆಯಿಂದ ಅದನ್ನು ಕಟ್ಟಿ ಅಥವಾ ಮಚ್ಚಿ ಕೆಲವು ನಿಮಿಷಗಳ ವರೆಗೆ ಬಿಟ್ಟು ತೆಗೆಯಿರಿ. ಇದೇ ರೀತಿ ನಿರಂತರ ಪ್ರಯತ್ನ ಮಾಡಿದ್ರೆ ನರಹುಲಿ ಸಮಸ್ಯೆ ಪರಿಹಾರಿಸಬಹುದು.

2. ಬೆಳ್ಳುಳ್ಳಿ : ಬೆಳ್ಳುಳ್ಳಿಯನ್ನು ಪೇಸ್ಟ್​ ಮಾಡಿ ನರಹುಲಿ ಇರುವ ಜಾಗಕ್ಕೆ ಹಚ್ಚಿ ಒಂದು ಗಂಟೆಗಳ ನಂತರ ಶುದ್ದ ನೀರಿಂದ ತೊಳೆಯಿರಿ. ಇದೇ ರೀತಿ ದಿನಕ್ಕೆ ಎರಡು ಬಾರಿ ಮಾಡಿ ಸಮಸ್ಯೆ ನಿವಾರಣೆಯಾಗುತ್ತದೆ.

3. ​ನಿಂಬೆಹಣ್ಣಿನ ಜೊತೆ ವಿನೆಗರ್ ಸಹ ಬಳಕೆಮಾಡಿ: ನಮ್ಮ ಚರ್ಮದ ಮೇಲ್ಭಾಗದ ಗಂಟುಗಳನ್ನು ಸುಲಭವಾಗಿ ಕರಗಿಸಬಲ್ಲ ಶಕ್ತಿ ವಿನೆಗರ್ ಗೆ ಇದೆ. ಇದು ಆಮ್ಲಿಯ ಆಗಿರುವುದರಿಂದ ವಿನೆಗರ್ ಮತ್ತು ನಿಂಬೆ ಹಣ್ಣಿನ ರಸವನ್ನು ಒಟ್ಟಿಗೆ ಮಿಶ್ರಣ ಮಾಡಿ. ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದನ್ನು ಈ ಮಿಶ್ರಣದಲ್ಲಿ ಅದ್ದಿ ಯಾವ ಭಾಗದಲ್ಲಿ ಗಂಟು ಉಂಟಾಗಿದೆ ಅಲ್ಲಿ ಕನಿಷ್ಠ ಒಂದು ಗಂಟೆಯ ಕಾಲ ಹಾಗೆ ಇರಲು ಬಿಡಿ. ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದನ್ನು ಈ ಮಿಶ್ರಣದಲ್ಲಿ ಅದ್ದಿ ಯಾವ ಭಾಗದಲ್ಲಿ ಗಂಟು ಉಂಟಾಗಿದೆ ಅಲ್ಲಿ ಕನಿಷ್ಠ ಒಂದು ಗಂಟೆಯ ಕಾಲ ಹಾಗೆ ಇರಲು ಬಿಡಿ.

4. ​ನಿಂಬೆಹಣ್ಣು ಮತ್ತು ಬೇಕಿಂಗ್ ಸೋಡಾ ಉಪಯೋಗಿಸಿ : ನಿಂಬೆಹಣ್ಣು ಮತ್ತು ಬೇಕಿಂಗ್ ಸೋಡಾ ಎರಡನ್ನೂ ತೆಗೆದುಕೊಂಡು ನಯವಾಗಿ ಪೇಸ್ಟ್ ತಯಾರು ಮಾಡಿ ಅದನ್ನು ಚರ್ಮದ ಮೇಲೆ ಉಂಟಾಗಿರುವ ಗಂಟಿನ ಭಾಗಕ್ಕೆ ಅನ್ವಯಿಸಿ ಸ್ವಲ್ಪ ಹೊತ್ತು ಹಾಗೆ ಇರಲು ಬಿಟ್ಟು ಆ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ದಿನದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಕೆಲವೇ ವಾರಗಳಲ್ಲಿ ನಿಮಗೆ ಚರ್ಮದ ಗಂಟು ಮಾಯವಾಗುತ್ತದೆ.

5. ​ನಿಂಬೆ ಹಣ್ಣಿನ ಜ್ಯೂಸ್ ಮತ್ತು ಬೆಳ್ಳುಳ್ಳಿ : ಬೆಳ್ಳುಳ್ಳಿ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳೊಂದಿಗೆ ಆಂಟಿ ವೈರಲ್ ಸ್ವಭಾವಗಳನ್ನು ಸಹ ಪಡೆದಿದೆ. ಹೀಗಾಗಿ ನಿಮ್ಮ ಚರ್ಮದ ಮೇಲಿನ ಗಂಟು ನಿವಾರಣೆಯಲ್ಲಿ ಬೆಳ್ಳುಳ್ಳಿ ಅಚ್ಚುಕಟ್ಟಾಗಿ ಕೆಲಸ ಮಾಡಬಲ್ಲದು. ಇದಕ್ಕಾಗಿ ನೀವು ಬೆಳ್ಳುಳ್ಳಿಯನ್ನು ಮೇಲ್ಭಾಗದ ಸಿಪ್ಪೆ ತೆಗೆದು ಅದನ್ನು ಚೆನ್ನಾಗಿ ಜಜ್ಜಿ ಪೇಸ್ಟು ತಯಾರು ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಬೆರೆಸಿ ಅದನ್ನು ಗಂಡು ಉಂಟಾಗಿರುವ ಜಾಗದಲ್ಲಿ ಅನ್ವಯಿಸಿ ಸುಮಾರು 20ರಿಂದ 30 ನಿಮಿಷಗಳು ಹಾಗೆ ಇರಲು ಬಿಟ್ಟು ಆನಂತರ ಸಾಧಾರಣ ನೀರಿನಲ್ಲಿ ತೊಳೆದುಕೊಳ್ಳಿ. ದಿನದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಮೂಗಿನ ಭಾಗದ ಗಂಟು ಮಾಯವಾಗುತ್ತದೆ.

RELATED ARTICLES

Related Articles

TRENDING ARTICLES