Wednesday, January 22, 2025

100 ವರ್ಷ ಬದುಕಬೇಕು ಎಂಬ ಆಸೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕಳೆದ ವರ್ಷವೂ ನಾನು ರಮಣಶ್ರೀಶರಣ ಪ್ರಶಸ್ರಿ ಪ್ರದಾನ ಮಾಡಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ರಮಣಶ್ರೀ ಶರಣ ಪ್ರಶಸ್ರಿ ಪ್ರದಾನ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಕಳೆದ ವರ್ಷವೂ ನಾನು ರಮಣಶ್ರೀಶರಣ ಪ್ರಶಸ್ರಿ ಪ್ರದಾನ ಮಾಡಿದ್ದೆ. ಬಸವರಾಜ ಬೊಮ್ಮಾಯಿ‌ ಕಳೆದ ವರ್ಷವೂ ಬಂದಿದ್ದರು. ಬರಲೇಬೇಕು ಅಂತ ಒತ್ತಾಯ ಮಾಡಿದ್ರು. ನಾನು ಬಸವೇಶ್ವರ ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳಲ್ಲ. ಬಸವಾದಿ ಶರಣರಿಂದ ಮೂಡಿ ಬಂದ ಸಾಹಿತ್ಯ, ತತ್ವವನ್ನ 100ಕ್ಕೆ‌ 100ರಷ್ಟು ಪಾಲನೆ ಮಾಡುವ ಪ್ರಯತ್ನ ಮಾಡಬೇಕು ಎಂದರು.

ಇನ್ನು ಕಿರಿಯರಿಗೆ‌ ಸಾಕಷ್ಟು ಸಮಯವಿದೆ, ಹಿರಿಯರೂ ಪ್ರಶಸ್ರಿ ಪಡೆದುಕೊಂಡಿದ್ದಾರೆ. 100 ವರ್ಷ ಬದುಕಿ ಅಂತ ಗಾಂಧೀಜಿ‌ ಅಭಿಮಾನಿಯೊಬ್ಬರು ಪತ್ರ ಬರೆಯುತ್ತಾರೆ. ನಾನು 125 ವರ್ಷ ಬಾಳಬೇಕು ಅಂತ ಗಾಂಧೀಜಿ ಹೇಳುತ್ತಾರೆ. ನೀವು 100 ಇರಬೇಕು ಎಂದು ಹಿರಿಯ ಪ್ರಶಸ್ತಿ ಪುರಸ್ಕೃತರು ಸಿದ್ದರಾಮಯ್ಯ ಅವರಿಗೆ ಹೇಳಿದ್ರು. ಹೇ.. ನನಗೆ‌ ಶುಗರ್ ಇದೆ, 100 ವರ್ಷ ಇರೋಕೆ ಆಗೊಲ್ಲ ಬಿಡಿ. ಬೊಮ್ಮಾಯಿಗೂ ಶುಗರ್ ಇದೆ ಅಂದುಕೊಂಡಿದ್ದೇನೆ. ಎಲ್ಲ ರಾಜಕಾರಣಿಗಳಿಗೂ ಶುಗರ್ ಬರೋದು ಸಾಮಾನ್ಯ. ನೂರು ವರ್ಷ ಬದುಕಬೇಕೆಂಬ ಆಸೆ ಇದೆ. ಆದರೆ, ವ್ಯಾಯಾಮ, ಯೋಗ ಕ್ರಮಬದ್ದವಾಗಿ ಮಾಡೋಕೆ ಆಗೋಲ್ಲ ಎಂದು ಸಿದ್ದರಾಮಯ್ಯ ಅವರು ಹಾಸ್ಯ ಚಟಕಿ ಸಿಡಿಸಿದರು.

ಸಮಾಜಕ್ಕೆ ಬಸವಣ್ಣನವರ ಕೊಡುಗೆ ಅಪಾರವಾದುದು. ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಇದರಿಂದ ಲಕ್ಷಾಂತರ ಜನ ಅಕ್ಷರ ಸಂಸ್ಕೃತಯಿಂದ ವಂಚಿತರಾಗಿದ್ದಾರೆ. ಅದು ಸಿಕ್ಕಿದಿದ್ರೆ ಅಕ್ಷರ ವಂಚಿತರಾಗಲು ಸಾಧ್ಯವಾಗುತ್ತಿರಲಿಲ್ಲ. ಜನವರಿ 26, 1950ರಲ್ಲಿ ನಮ್ಮ ಸಂವಿಧಾನ ಜಾರಿಗೆ ಬಂತು. ಆಗ ವೈವಿದ್ಯಮಯ ಜೀವನಕ್ಕೆ ಕಾಲಿಡುತ್ತೇವೆ. ರಾಜಕೀಯ ಸಮಾನತೆ ಸ್ವಾತಂತ್ರ್ಯ ಬಂದ್ಮೇಲೆ ಸಿಕ್ಕಿದೆ. ಮತ ಚಲಾಯಿಸುವ ಹಕ್ಕು ಸಿಕ್ಕಿದೆ. ಕಮ್ಮಾರ, ಚಮ್ಮಾರ ಎಲ್ಲರಿಗೂ ಒಂದೇ ವೋಟ್. ಆದರೆ, ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವದ ಸಿಕ್ಕಿಲ್ಲ. ಇದನ್ನ ಬಸವಣ್ಣ ಬಹಳ ಹಿಂದೆಯೇ ಹೇಳಿದ್ರು. ಸಮಾನತೆಯ ಸಮಾಜ ನಿರ್ಮಾಣ ಆಗಬೇಕು ಅಂದ್ರು ಆದರೆ ಜಾತಿ ವ್ಯವಸ್ಥೆ ಹೋಗಬೇಕು ಅಲ್ವಾ? ಆದರೆ ಈಗಲೂ ಜಾತಿ ವ್ಯವಸ್ಥೆ ಇದೆ. ಎಲ್ಲರಿಗೂ ಸಮಾನ ಅವಕಾಶ ಇರಬೇಕು, ವೈಚಾರಿಕತೆ ಇರಬೇಕು. ಕರ್ಮ ಸಿದ್ದಾಂತ, ಮೌಢ್ಯಗಳು ಇರಬಾರದು. ನಾನು ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಬಸವಣ್ಣನ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಸಮಾಜದಲ್ಲಿ ಬದಲಾವಣೆ ಆಗಬೇಕು. ಅಸಮಾನತೆ ಹೋಗದೆ ಜಾತಿ ವ್ಯವಸ್ಥೆ ಹೋಗಲ್ಲ. ಆರ್ಥಿಕ, ಸಾಮಾಜಿಕ, ರಾಜಕೀಯ ಬದಲಾವಣೆ ಆದರೆ ಶಕ್ತಿ ತುಂಬಬಹುದು. ಮುಂದಿನ ಬಜೆಟ್ ವೇಳೆ ಶರಣ ಸಾಹಿತ್ಯ ಪರಿಷತ್ತಿನ ಬೇಡಿಕೆ ಈಡೇರಿಸುತ್ತೇನೆ ಎಂದು ಸಿದ್ದರಾಮಯ್ಯ ಬಸವಣ್ಣನವರ ಆಶಯವನ್ನು ಸ್ಮರಿಸಿದ್ದಾರೆ.

RELATED ARTICLES

Related Articles

TRENDING ARTICLES