Sunday, February 23, 2025

BJP-RSS ದೇಶದ ರಾಜಕೀಯಕ್ಕೆ ವಿಷಕಾರಿ ಹಾವುಗಳಿದ್ದಂತೆ: ಮಲ್ಲಿಕಾರ್ಜುನ್​ ಖರ್ಗೆ

ಮುಂಬೈ:  BJP ಮತ್ತ RSS ದೇಶದ ರಾಜಕೀಯಕ್ಕೆ ಅಪಾಯಕಾರಿ ಮತ್ತು ವಿಷಕಾರಿ ಹಾವುಗಳಿದ್ದಂತೆ ಎಂದು ಮಹರಾಷ್ಟ್ರದ ಚುನಾವಣಾ ಪ್ರಚಾರದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಂಗ್ಲಿಯಲ್ಲಿ ಕಾಂಗ್ರೆಸ್‌ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಖರ್ಗೆ, ಭಾರತದ ರಾಜಕೀಯದಲ್ಲಿ ಅತ್ಯಂತ ಅಪಾಯಕಾರಿ ಏನಾದರೂ ಇದ್ದರೆ ಅದು ಬಿಜೆಪಿ ಮತ್ತು ಆರ್‌ಎಸ್‌ಎಸ್. ಇವು ವಿಷಕಾರಿ ಹಾವಿನಂತಿದೆ. ಹಾವು ಕಚ್ಚಿದರೆ, ವ್ಯಕ್ತಿ ಸಾಯುತ್ತಾನೆ. ಆದರೆ ಇಂತಹ ವಿಷಕಾರಿ ಹಾವುಗಳನ್ನು ಕೊಲ್ಲಬೇಕು ಎಂದು ಹೇಳಿದ್ದಾರೆ.

ನ.20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಈ ಮಧ್ಯೆ ರಾಜ್ಯದಲ್ಲಿ ಈಗಾಗಲೇ ಚುನಾವಣಾ ಕಾವು ಹೆಚ್ಚಾಗಿದೆ. ಮಹಾಯುತಿ ಕೂಟ ಹಾಗೂ ವಿಪಕ್ಷ ಮಹಾ ವಿಕಾಸ ಅಘಾಡಿ ಕೂಟದ ಮಧ್ಯೆ ತೀವ್ರ ಪೈಪೋಟಿ ಇರಲಿದ್ದು, ಸಾಂಗ್ಲಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಚುನಾವಣಾ ರ್‍ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿಷಕಾರಿ ಹಾವುಗಳಿಗೆ ಹೋಲಿಸಿದ್ದಾರೆ.

RELATED ARTICLES

Related Articles

TRENDING ARTICLES