Thursday, January 23, 2025

ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲು

ಚಿಕ್ಕೋಡಿ : ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಮೂರು ಜನ ನೀರುಪಾಲಾದ ಘಟನೆ ಚಿಕ್ಕೋಡಿಯ ಬೆನಕನಹೊಳಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆನಕನಹೊಳಿ ಗ್ರಾಮದ ಲಕ್ಷ್ಮಣರಾಮ ಅಂಬಲಿ (49), ಪುತ್ರರಾದ ರಮೇಶ ಅಂಬಲಿ (14), ಯಲ್ಲಪ್ಪ ಅಂಬಲಿ (12) ನೀರಿನಲ್ಲಿ ಮುಳುಗಿದ್ದಾರೆ ಎಂದು ಮಾಹಿತಿ ದೊರೆತಿದ್ದು.  ಮೀನು ಹಿಡಿಯಲು ನದಿಗೆ ಬಲೆ ಹಾಕುವ ವೇಳೆ ಅವಘಡ ನಡೆದಿದೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು.

ಬೆಳಿಗ್ಗೆಯಿಂದ ಮೂವರಿಗಾಗಿ ಎನ್​ಡಿಆರ್​ಎಫ್ (NDRF) ತಂಡದಿಂದ ಶೋಧಕಾರ್ಯ ನಡೆಯುತ್ತಿದ್ದು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES