ನೈಜೀರಿಯಾ ಸರ್ಕಾರವು ‘ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಗರ್’ ಪುರಸ್ಕಾರವನ್ನು ನೀಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸಲಿದೆ ಎಂದು ವರದಿಯಾಗಿದೆ. ಇದರೊಂದಿಗೆ ಮೋದಿ ಅವರು ಈ ಗೌರವ ಸ್ವೀಕರಿಸಿದ ಎರಡನೇ ವಿದೇಶಿ ನಾಯಕ ಎನಿಸಲಿದ್ದಾರೆ.
1969ರಲ್ಲಿ ಬ್ರಿಟನ್ ರಾಣಿ ಎಲಿಜಬೆತ್ ಅವರಷ್ಟೇ ಈ ಪುರಸ್ಕಾರಕ್ಕೆ ಭಾಜನರಾಗಿದ್ದರು. ನೈಜೀರಿಯಾದ ಈ ಪುರಸ್ಕಾರವು, ಮೋದಿ ಅವರಿಗೆ ಜಾಗತಿಕ ಮಟ್ಟದಲ್ಲಿ ಯಾವುದೇ ದೇಶದಿಂದ ದೊರೆತ 17ನೇ ಪ್ರಶಸ್ತಿಯಾಗಲಿದೆ. ಮೂರು ರಾಷ್ಟ್ರಗಳಿಗೆ ಐದು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ, ಇಂದು ನೈಜೀರಿಯಾದ ರಾಜಧಾನಿ ಅಬುಜಾ ತಲುಪಿದ್ದಾರೆ. ಅದರೊಂದಿಗೆ ಭಾರತದ ಪ್ರಧಾನಿಯೊಬ್ಬರು 17 ವರ್ಷಗಳ ಬಳಿಕ ಈ ದೇಶಕ್ಕೆ ಭೇಟಿಕೊಟ್ಟಂತಾಗಿದೆ. ಮೋದಿ ಅವರನ್ನು ಸಚಿವ ನೀಸಮ್ ಎಜೆನ್ ವೈಕ್ ಅವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.