ಮಂಡ್ಯ : ಸಚಿವ ಚಲುವರಾಯಸ್ವಾಮಿ ಕುಮಾರಸ್ವಾಮಿ ಅವರ ಹೇಳಿಕೆಗೆ ಟಾಂಗ್ ನೀಡಿದ್ದು.ಮದ್ದೂರಿನ ಹೊಸಗಾವಿ ಗ್ರಾಮದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದು. ಕುಮಾರಸ್ವಾಮಿ ಬಾಯಿಗೆ ಬಂದಾಗೆ ಮಾತನಾಡಿದ್ರೆ ಕೇಳಿಸಿಕೊಳ್ಳೋಕೆ ನಾವು ತಯಾರಿಲ್ಲ. ಸ್ನೇಹಿತರನ್ನ ಬಿಟ್ಟು ಇವಾಗ ಜೆಡಿಎಸ್ ಪಕ್ಷ ಕುಟುಂಬದ ಪಕ್ಷವಾಗಿದೆ ಇತಿಹಾಸ ಚರ್ಚೆ ಅವಶ್ಯಕತೆ ಇದ್ರೆ ಆಹ್ವಾನ ಕೊಡ್ತೇನೆ ವೇದಿಕೆ ಸಿದ್ದಪಡಿಸಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಉಪಚುನಾವಣೆ ಬಗ್ಗೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ ಚನ್ನಪಟ್ಟಣ ಚುನಾವಣೆ ಚೆನ್ನಾಗಿ ಆಗಿದೆ. ಜೆಡಿಎಸ್ನವರು ನಾವು ಗೆಲ್ತೇವೆ ಅಂತಾರೆ ಆದರೆ ಯೋಗೇಶ್ವರ್ ಗೆದ್ದೆ ಗೆಲ್ತಾರೆ, ಇನ್ನೆರಡು ದಿನ ಫಲಿತಾಂಶ ಬರುತ್ತೆ. ಅಲ್ಲಿವರೆಗೂ ಸ್ವಲ್ಪ ತಾಳ್ಮೆಯಿಂದ ಇರೋಣ ಎಂದು ಹೇಳಿದರು.
ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ಕೊಟ್ಟ ಚೆಲುವರಾಯಸ್ವಾಮಿ !
ಕೇಂದ್ರ ಸಚಿವ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಚೆಲುವರಾಯಸ್ವಾಮಿ ಮಾಜಿ ಮುಖ್ಯಮಂತ್ರಿ, ದೇಶ ಆಳಿದ ಪ್ರಧಾನಿ ಮಗ ಬಾಯಿಗೆ, ನಾಲಿಗೆಗೆ ಹಿಡಿತ ಇಲ್ಲದೆ ಮಾತನಾಡ್ತಾರೆ. ಈಗ ನಾನು ಉತ್ತರ ಕೊಡೋದು ಸೂಕ್ತ ಅಲ್ಲ. ಮಾತನಾಡಲ್ಲ ಮಾತನಿಂದ ದೊಡ್ಡವರಾಗಲು ಸಾಧ್ಯವಿಲ್ಲ. ನಡವಳಿಕೆಯಿಂದ ದೊಡ್ಡವರಾಗೋದು ಎಂದು ಹೇಳಿದರು.
ನಾನು ಶಾಶ್ವತವಾಗಿ ಮಂತ್ರಿಯಲ್ಲ, ಜನರು ತಾತ್ಕಾಲಿಕವಾಗಿ ಅಧಿಕಾರ ಕೊಟ್ಟಿದ್ದಾರೆ. ನಾನು ಮಂತ್ರಿ ಅಂತ ಬಾಯಿಗೆ ಬಂದಾಗೆ ಮಾತನಾಡೋಕ್ಕಾಗುತ್ತಾ? ಕುಮಾರಸ್ವಾಮಿ ಅವರಿಗೆ ಅಸೆಂಬ್ಲಿಯಲ್ಲೆ ಉತ್ತರ ಕೊಟ್ಟಿದ್ದೇನೆ.
ಇತಿಹಾಸ ಚರ್ಚೆ ಮಾಡಬೇಕಿದ್ರೆ ಒಂದು ಟೈಮ್ ನಿಗಧಿ ಮಾಡಿ ಅಂತ ರಿಕ್ವೆಸ್ಟ್ ಮಾಡಿದ್ದೆ. ಇವಾಗ ಅವರು ಪಾರ್ಲಿಮೆಂಟ್ ಗೆ ಹೋಗಿದ್ದಾರೆ ನಾನು ಅಸೆಂಬ್ಲಿಯಲ್ಲಿದ್ದೇನೆ. ಅವರು ಇಲ್ಲಿಗೆ ಬರಲು ಆಗಲ್ಲ, ನಾನು ಪಾರ್ಲಿಮೆಂಟ್ ಗೆ ಹೋಗಲು ಆಗಲ್ಲ. ಮಾಧ್ಯಮ, ಸಾರ್ವಜನಿಕರ ಮುಂದೆ ನನ್ನ ನಾಲಿಗೆ ಹರಿಬಿಡಲ್ಲ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಚಿವ ನನ್ನ ಆಸ್ತಿ ಅವರಿಗೆ ಕೊಟ್ಟಿಲ್ಲ, ಅವರ ಆಸ್ತಿ ನನಗೆ ಕೊಟ್ಟಿಲ್ಲ. ನನ್ನ ಅವರ ನಡುವೆ ಕಮಿಟ್ಮೆಂಟ್ ಇಲ್ಲ ರಾಜಕೀಯ ಅಷ್ಟೆ. ಯಾರ ಇತಿಹಾಸವನ್ನ ಬುಕ್ನಲ್ಲಿ ಪ್ರಿಂಟ್ ಮಾಡಬೇಕು.
ಅಸೆಂಬ್ಲಿಯಲ್ಲಿ ಚರ್ಚೆಯಾದರೆ ಮುಂದಿನ ಪೀಳಿಗೆಗೆ ಉಪಯೋಗ. ಕುಮಾರಸ್ವಾಮಿ ಬಾಯಿಗೆ ಬಂದಾಗೆ ಮಾತನಾಡಿದ್ರೆ ಕೇಳಿಸಿಕೊಳ್ಳೋಕೆ ತಯಾರಿಲ್ಲ ನಾನು ಲಘುವಾಗಿ ಮಾತನಾಡಿದ್ರೆ ನನ್ನ ಕ್ಷೇತ್ರದ ಜನ ಗೌರವ ಕೊಟ್ಟು ಎರಡು ಸಲ ಸೋಲಿಸಿ 6 ಬಾರಿ ಗೆಲ್ಲಿಸಿದ್ದಾರೆ. ಲೋಕಸಭಾ ಸದಸ್ಯನಾಗಿ, ಶಾಸಕನಾಗಿ ಮಂತ್ರಿಯಾಗಿದ್ದೇನೆ. ಸಾರ್ವಜನಿಕ ಕಮಿಟ್ಮೆಂಟ್ ಇದೆ ಜನರು ಗೌರವ ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿ ಜೊತೆ ಚರ್ಚೆ ಮಾಡಬೇಕು ಅಂದ್ರೆ ಹೇಳಿ ನನ್ನ ಐದು ಜನ ಸ್ನೇಹಿತರನ್ನ ಕರೆದುಕೊಂಡು ಬರ್ತಿನಿ. ಎದರುಕಡೆ ಕುಳಿತು ಚರ್ಚೆ ಮಾಡೋಣ ಯಾರು ವಲಸು, ಕಚಾಡ, ಕೊಚ್ಚೆ ಎಲ್ಲವನ್ನೂ ಚರ್ಚೆ ಮಾಡೋಣ ಎಂದು ಹೇಳಿದರು.
ನಾನು, ಕುಮಾರಸ್ವಾಮಿ 20 ವರ್ಷ ಇಬ್ಬರು ಜೊತೆಯಲ್ಲಿ ರಾಜಕಾರಣ ಮಾಡಿದ್ದೇನೆ. ಪಕ್ಷ ಬಳಸಬೇಕಾದ ಅವರು ಕಳ್ಸಿದ್ರ, ನಾವು ಬಿಟ್ವಾ? ಯಾಕೆ ಪಕ್ಷ ಬಿಟ್ಟೋ ಹೇಗೆ ನಡೆದುಕೊಂಡ್ರು ಎದರುಗಡೆ ಉತ್ತರ ಕೊಡ್ತೇನೆ.
ಈ ಎಲ್ಲಾ ಸ್ನೇಹಿತರಿಂದ ಮುಖ್ಯಮಂತ್ರಿ ಆಗಿದ್ದೇನೆ ಅಂತನು ಮಾತನಾಡಿದ್ದಾರೆ. ಕರಾಳ ದಿನ ಅಂತನಾ? ಅಷ್ಟು ದಿನ ನಾವು ಕೊಳಚೆ ಆಗಿದ್ವಾ? 20 ವರ್ಷ ಕೊಳಚೆ ಹೊಳಗೆ ಹೇಗಿದ್ರಂತೆ? ಇತಿಹಾಸ ದೊಡ್ಡ ಪುರಾಣ, ಅವರ ಎದುರುಗಡೆ ಹೇಳ್ತೇನೆ. , ನಾನು ಬಾಲು, ಎಲ್ಲರು ಹೋಗ್ತೇವೆ ಎಂದು ಕುಮಾರಸ್ವಾಮಿ ಕೊಚ್ಚೆ ಹೇಳಿಕೆಗೆ ಟಾಂಗ್ ನೀಡಿದರು.