Tuesday, January 21, 2025

ಸಿನಿಮಾವಾಗಿ ಗೋಧ್ರಾ ದುರಂತ : ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

ಗುಜರಾತ್​​: 2002ರ ಗೋಧ್ರಾ ರೈಲು ದುರಂತಕ್ಕೆ ಕಾರಣವಾದ ಘಟನೆಗಳನ್ನು ಬಿಚ್ಚಿಡುವ ‘ದಿ ಸಾಬರಮತಿ ರಿಪೋರ್ಟ್’ ಚಿತ್ರದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತಿರುವುದಕ್ಕಾಗಿ ಮತ್ತು ಅದರ ಸುತ್ತಲಿನ ವಿವಾದವನ್ನು ತಳ್ಳಿಹಾಕುತ್ತಿರುವುದಕ್ಕೆ ಚಿತ್ರ ತಂಡವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಅಲೋಕ್ ಭಟ್ ಅವರು ಮಾಡಿರುವ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಅಭಿಪ್ರಾಯ ಹೊರ ಹಾಕಿದ್ದಾರೆ.

ವಿಕ್ರಾಂತ್ ಮಾಸ್ಸೆ ನಟಿಸಿರುವ ಚಲನಚಿತ್ರದ ಕುರಿತು “ಸಾಮಾನ್ಯ ಜನರು ನೋಡುವ ರೀತಿಯಲ್ಲಿ ಸತ್ಯ ಹೊರಬರುತ್ತಿರುವುದು ಒಳ್ಳೆಯದು” ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅನೇಕರು ಚಲನಚಿತ್ರವನ್ನು ನೋಡಲೇಬೇಕು ಎಂದು ಕರೆ ನೀಡಿದ್ದು, 2002 ರ ಗೋಧ್ರಾ ದುರಂತದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಲ್ಲಿ ಚಿತ್ರ ತಂಡದವರು ಶ್ಲಾಘನೀಯ ಕೆಲಸ ಮಾಡಿದ್ದಾರೆ, ಘೋರ ದುರಂತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES