Wednesday, January 22, 2025

‘ಕಾಟೇರ’ ಸಿನಿಮಾ ಖ್ಯಾತಿಯ ಬಾಲನಟನಿಗೆ ಅಪಘಾತ : ಆಸ್ಪತ್ರೆಗೆ ದಾಖಲು

ಶ್ರೀರಂಗಪಟ್ಟಣ(ನ.17):  ಕಾರು ಹಾಗೂ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಾಯಗೊಂಡ ಘಟನೆ ತಾಲೂಕಿನ ಹೊಸಹಳ್ಳಿ ಗೇಟ್‌ನ ಶ್ರೀರಂಗಪಟ್ಟಣ ಕೆಆರ್‌ಎಸ್‌ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ. ರಸ್ತೆ ಅಪಘಾತದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ಮಾಸ್ಟರ್ ರೋಹಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ.

‘ಒಂದಲ್ಲ ಎರಡಲ್ಲ’ ಸಿನಿಮಾದ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ಮಾಸ್ಟರ್ ರೋಹಿತ್​ಗೆ ಗಾಯವಾಗಿದ್ದು ಮೈಸೂರಿನ‌ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ಅಭಿನಯಿಸಿರುವ ಬಾಲನಟ ಅಪಘಾತಕ್ಕೆ ಇಡಾಗಿದ್ದು. ಬಾಲಕನ ದಂತದ ವಸುಡು ಕಟ್ ಆಗಿ ,ತಲೆ ಬುರುಡೆಗೆ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ.

ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಬಸ್ ಅಪಘಾತವಾಗಿದ್ದು. ಖಾಸಗಿ ಕಾರ್ಯಕ್ರಮ‌ ಮುಗಿಸಿ ವಾಪಸ್ ಮನೆಗೆ ತೆರಳುವಾಗ ಘಟನೆ ನಡೆದಿದ್ದು  KA11 N 4173 ನಂಬರಿನ ಕಾರಿಗೆ  ಟೂರಿಸ್ಟ್‌ಬಸ್​ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಘಟನೆಯಲ್ಲಿ ರೋಹಿತ್ ತಾಯಿ ಛಾಯಾಲಕ್ಷ್ಮಿ‌ ಕಾಲು, ಕೈಗಳಿಗೆ ಗಾಯವಾಗಿದ್ದು  ಕಾರಿನಲ್ಲಿದ್ದ ರೋಹಿತ್ ಗೆಳೆಯ ಹಾಗು ಉಪನ್ಯಾಸಕ ಸೇರಿ‌ ನಾಲ್ವರಿಗೆ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES