Sunday, November 17, 2024

ಬಿಜೆಪಿ ಉದ್ದೇಶಪೂರ್ವಕವಾಗಿ ಮಣಿಪುರವನ್ನು ಸುಟ್ಟುಹಾಕಲು ಬಯಸುತ್ತಿದೆ: ಮಲ್ಲಿಕಾರ್ಜುನ್​ ಖರ್ಗೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಳಿ ನಡೆಸಿದ್ದಾರೆ.

‘ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿ ಮಣಿಪುರವನ್ನು ಸುಟ್ಟುಹಾಕಲು ಬಯಸುತ್ತಿದೆ. ಅದಕ್ಕಾಗಿ ದ್ವೇಷಪೂರಿತ ವಿಭಜಕ ರಾಜಕಾರಣವನ್ನು ಮಾಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ. ‘ಮಣಿಪುರದ ಜನರ ದುಃಖವನ್ನು ನಿವಾರಿಸಲು ಪ್ರಧಾನಿ ಅವರು ಎಂದಿಗೂ ಅಲ್ಲಿಗೆ ಕಾಲಿಡಲಿಲ್ಲ. ಇದನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರೇ, ನಿಮ್ಮ ಡಬಲ್ ಎಂಜಿನ್ ಸರ್ಕಾರದಲ್ಲಿ, ಮಣಿಪುರ ಒಂದಾಗಿಲ್ಲ, ಸುರಕ್ಷಿತವೂ ಅಲ್ಲ. ಮೇ 2023ರಿಂದ ಮಣಿಪುರ ರಾಜ್ಯದ ಜನತೆ ಊಹಿಸಲಾಗದ ನೋವು ಹಾಗೂ ಹಿಂಸೆಗೆ ಒಳಗಾಗಿದ್ದಾರೆ. ಇದು ಅಲ್ಲಿನ ಜನರ ಭವಿಷ್ಯವನ್ನು ನಾಶಪಡಿಸಿದೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES