Wednesday, January 22, 2025

ವಿಜಯೇಂದ್ರಗೆ ಅಪ್ಪನ ರೀತಿ ಲೂಟಿ ಮಾಡೋದು ಮಾತ್ರ ಗೊತ್ತು ಎಂದು ವಾಗ್ದಳಿ ನಡೆಸಿದ ಯತ್ನಾಳ್

ಹುಬ್ಬಳ್ಳಿ : ಇಂದು ಶಾಸಕ ಬಸನಗೌಡಪಾಟೀಲ್​​ ಯತ್ನಾಳ್​ ಸ್ವಪಕ್ಷದವರ ಮೇಲೆ ವಾಗ್ದಾಳಿ ನಡೆಸಿದ್ದು. ಮಾಜಿ ಸಚಿವ ರೇಣುಕಾಚಾರ್ಯಗೆ ಹಂದಿ ಎಂದು ಕರೆದಿದ್ದಾರೆ. ಜೊತೆಗೆ ವಿಜಯೇಂದ್ರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು. ಪ್ರತಾಪ್​ ಸಿಂಹನನ್ನು ವಕ್ಫ್​ ಕಮಿಟಿಯಿಂದ ಕೈ ಬಿಟ್ಟಿರುವ ಹಿನ್ನಲೆ ಸ್ವಪಕ್ಷದವರ ಮೇಲೆ ಗರಂ ಆಗಿದ್ದಾರೆ.

ರೇಣುಕಾಚಾರ್ಯ ಬಗ್ಗೆ ಮಾತನಾಡಿದ ಯತ್ನಾಳ್​ ಅಂತಹ ಥರ್ಡ್ ಗ್ರೇಡ್ ರಾಜಕಾರಣಿಯ ಪ್ರಶ್ನೆಗೆ ನಾನು  ಉತ್ತರ ಕೊಡಲ್ಲ ಮಾಜಿ ಶಾಸಕ ರೇಣುಕಾಚಾರ್ಯ ವಿರುದ್ದ ಯತ್ನಾಳ ಗರಂ ಆದರು. ಮುಂದುವರಿದು ಮಾತನಾಡಿದ ಯತ್ನಾಳ್​  ಹಾದಿ ಬೀದಿಲಿ ಹೋಗೋರಿಗೆ ನಾನು ಉತ್ತರ ಕೊಡಲ್ಲ. ಪಕ್ಷದಲ್ಲಿರುವವರಿಗೆ  ಯಾವ ವಕ್ಫ ಹೋರಾಟ ಬೇಕಾಗಿಲ್ಲ ಎಂದು ಪ್ರತಾಪ್ ಸಿಂಹ ಹೆಸರನ್ನು ಕೈ ಬಿಟ್ಟಿರೋದಕ್ಕೆ ಗರಂ ಆದರು.

ವಿಜಯೇಂದ್ರ ಬಗ್ಗೆ ಮಾತನಾಡಿದ ಯತ್ನಳ್​ ಇದು ಅಪ್ಪ ಮಕ್ಕಳ ದಂಧೆ ಎಂದು ಹೇಳಿದರು. ಡಿಸೆಂಬರ್ 25 ಕ್ಕೆ ಜನಜಾಗೃತಿ ಸಭೆ ನಡೆಸುತ್ತಿದ್ದಾರೆ. ವಕ್ಪ್​ ಪ್ರವಾಸಕ್ಕೆ ಮೂರು ತಂಡಗಳನ್ನು ಮಾಡಿದ್ದಾರೆ. ಆದರೆ ಈ ತಂಡಗಳಿಗೆ ಅಪ್ಪ ಅವ್ವ ಯಾರು ಇಲ್ಲ ನಮ್ಮನ್ನು ನೋಡಿ ಮೂರು ತಂಡ ರಚನೆ ಮಾಡಿದ್ದಾರೆ. ಅವರಿಗೆ ವಕ್ಪ್ ಕಾಳಜಿ ಇಲ್ಲ
ಅವರಿಗೆ ಇರೋದು ಅಪ್ಪನ ತರಹ ಲೂಟಿ ಮಾತ್ರ ಎಂದು ಪರೋಕ್ಷವಾಗಿ ವಿಜಯೇಂಂದ್ರ ವಿರುದ್ದ ಯತ್ನಾಳ ಗರಂ ಆದರು.

50 ಕೋಟಿ ಆಫರ್ ವಿಚಾರಕ್ಕೆ ಯತ್ನಾಳ ಗರಂ

ಸಿದ್ದರಾಮಯ್ಯರ 50 ಕೋಟಿ ಆಫರ್​ ಬಗ್ಗೆ ಮಾತನಾಡಿದ ಯತ್ನಳ್​, ಆಫರ್ ಕೊಟ್ಟವರು ಯಾರೂ, ಬಿಜೆಪಿ ದೇವರಾಣೆಗೆ ಸರ್ಕಾರ ರಚನೆ ಮಾಡೋ ಅವಶ್ಯಕತೆ ಇಲ್ಲ. ಡಿಕೆ ಶಿವಕುಮಾರ್ ಸಿದ್ದರಾಮಯ್ಯರನ್ನು ಇಳಿಸಲು ಪ್ರಯತ್ನ ಮಾಡತ್ತಿದ್ದಾರೆ. ನಾವು ಸರ್ಕಾರ ರಚನೆ ಮಾಡಿದ್ರೆ 100% ಭ್ರಷ್ಟಾಚಾರ ಮಾಡ್ತೀವಿ,, ಕುದುರೆ ವ್ಯಾಪಾರ ಡಿಕೆ ಶಿವಕುಮಾರ್ ವಿಜಯೇಂದ್ರ ಇಬ್ಬರಿಗೆ ಮಾತ್ರ ಗೊತ್ತು ಎಂದು ಹೇಳಿದರು.

RELATED ARTICLES

Related Articles

TRENDING ARTICLES