Sunday, December 22, 2024

ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್​ನಲ್ಲಿ ಚಿಕಿತ್ಸೆ: ಇರಾನ್ ತೀರ್ಮಾನಕ್ಕೆ ಮಹಿಳೆಯರ ಆಕ್ರೋಶ

ಇರಾನ್​ :  ಹಿಜಾಬ್ ಧರಿಸುವುದಿಲ್ಲ ಎಂದು ನಿಯಮ ಉಲ್ಲಂಘಿಸುವ ಮಹಿಳೆಯರಿಗೆ ಚಿಕಿತ್ಸೆ ನೀಡಲು ಕ್ಲಿನಿಕ್​ಗಳನ್ನು  ತೆರೆಯಲಾಗುತ್ತದೆ. ಈ ಬಗ್ಗೆ ಇರಾನ್ ಸರಕಾರ ತೀರ್ಮಾನಿಸಿದೆ.ಈ ಬಗ್ಗೆ ಹೇಳಿಕೆ ನೀಡಿದ ಇರಾನ್​ ಕುಟುಂಬ ಮತ್ತು ಮಹಿಳಾ ವಿಭಾಗ ವೈಜ್ಞಾನಿಕವಾಗಿ ಚಿಕಿತ್ಸೆ ನೀಡಲು ಕ್ಲಿನಿಕ್​ಗಳನ್ನು ತೆರೆಯಲಾಗುತ್ತದೆ ಎಂದು ಪ್ರಕಟಿಸಿದೆ.

ಸರಕಾರದ ತೀರ್ಮಾನವನ್ನು ಆ ದೇಶದಲ್ಲಿರುವ ಮಹಿಳಾ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಒಕ್ಕೂಟದ ಸದಸ್ಯರು ಬಲವಾಗಿ ಖಂಡಿಸಿದ್ದಾರೆ. “ಅದು ಕ್ಲಿನಿಕ್ ಬದಲು ಜೈಲಾಗಿ ಪರಿವರ್ತನೆಯಾಗಲಿದೆ’ ಎಂದು ಇರಾನ್ ಮಹಿಳೆಯೊಬ್ಬರು ಹೇಳಿದ್ದಾರೆ. ನಮಗೆ ಆಹಾರಕ್ಕೇ ಕೊರತೆ ಇದೆ. ಒಂದು ತುಂಡು ಬಟ್ಟೆಯ ವಿಚಾರವಾಗಿ ರಾದ್ಧಾಂತ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES