Sunday, January 19, 2025

ಕೋವಿಡ್​​ ಸಮಯದಲ್ಲಿ ಜನರ ಪ್ರಾಣ ಉಳಿಸಿದ ನಮ್ಮ ಮೇಲೆ ದುರುದ್ದೇಶದಿಂದ ತನಿಖೆ ನಡೆಸುತ್ತಿದ್ದಾರೆ: ಬಿಎಸ್​ವೈ

ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಉಪ ಚುನಾವಣೆ ಬಗ್ಗೆ  ಹೇಳಿಕೆ ನೀಡಿದ್ದು. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ, ಮೂರು ಕ್ಷೇತ್ರದಲ್ಲಿ ಎನ್​ಡಿಎ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ.  ವಾತಾವರಣ ಚೆನ್ನಾಗಿತ್ತು ಜನರು ಒಳ್ಳೆಯ ಬೆಂಬಲ ಕೊಡ್ತಿದ್ದರು ಎಂದು ಹೇಳಿದರು.

ವಕ್ಫ್ ಬೋರ್ಡ್ ವಿರುದ್ದ ಬಿಜೆಪಿ ಕಮಿಟಿ ರಚನೆ ವಿಚಾರವಾಘಿ ಮಾತನಾಡಿದ ಬಿಎಸ್​​ವೈ , ವಕ್ಪ್ ಬೋರ್ಡ್ ಆಸ್ತಿ ಕಬಳಿಕೆ ವಿರುದ್ದ ಬಿಜೆಪಿ ಕಮಿಟಿ ರಚನೆ ಮಾಡಿದ್ದೇವೆ ಈ ಕಮಿಟಿ ರಾಜ್ಯದಲ್ಲಿ ಪ್ರವಾಸ ಮಾಡಿ ಬಂದು ವರದಿ ಕೊಡ್ತಾರೆ ವರದಿ ಬಳಿಕ ಮುಂದಿನ ಹೋರಾಟದ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಕೋವಿಡ್​​ ಹಗರಣದ ಬಗ್ಗೆ ಯಡಿಯೂರಪ್ಪ ಮಾತು !

ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಕೋವಿಡ್​ ಹಗರಣದ ತನಿಖೆಯ ಬಗ್ಗೆ ಮಾತನಾಡಿದ ಬಿಎಸ್​​ವೈ ‘ಕೋವಿಡ್ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸ ಮಾಡಿದ್ದೇವೆ ದುರುದ್ದೇಶದಿಂದ ಎಸ್​ಐಟಿ ರಚನೆ ಮಾಡಿದ್ದಾರೆ ನಾವು ಎಲ್ಲಾ ರೀತಿ ತನಿಖೆ ಎದುರಿಸಿ ಅದರಿಂದ ಹೊರಗೆ ಬರುತ್ತೇವೆ. ಕೋವಿಡ್ ಸಮಯದಲ್ಲಿ ಜನರ ಪ್ರಾಣ ಉಳಿಸುವ ಕೆಲಸ ಮಾಡಿದ್ದೇವೆ. ಜನರನ್ನು ಡೈವರ್ಟ್ ಮಾಡಲು ಹಗರಣ ನಡೆದಿದೆ ಎಂಬ ಮಾತು ಹೇಳ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯರ 50 ಕೋಟಿ ನೀಡಿ ಶಾಸಕರನ್ನು ಖರೀದಿಸಿ ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್​​ವೈ, ಸರ್ಕಾರ ಬೀಳಿಸುವ ಕೆಲಸ ಯಾರು ಮಾಡ್ತಿಲ್ಲ ಇದು ಹುಚ್ಚುತನದ ಪರಮಾವಧಿಯಾಗಿದೆ ಬಿಜೆಪಿ ಶಾಸಕರನ್ನು ಯಾರು ಕರೆಯುತ್ತಿಲ್ಲ ಕಾಂಗ್ರೆಸ್ ಶಾಸಕರನ್ನು ಯಾರು ಕರೆಯುತ್ತಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES