Wednesday, January 22, 2025

ಒಳ್ಳೆ ಹುಡುಗನ ಜೊತೆ ಡಿ.ಗ್ಯಾಂಗ್ ಕಿರಿಕ್​: ಮುಚ್ಕೊಂಡ್​​ ಇರೋಕೆ ಏನು ರೋಗ ಎಂದ ನಟ

ಬೆಂಗಳೂರು: ಕನ್ನಟ ಚಿತ್ರರಂಗದ ನಟ, ನಿರ್ದೇಶಕ ಹಾಗೂ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಎರಡನೇ ಸಲ ಕಿರಿಕ್ ಆಗಿದೆ. ಆದರೆ ಈ ಸಲ ತುಂಬಾ ಬೇಸರದಿಂದ ಸೋಷಿಯಲ್ ಮೀಡಿಯಾದಲ್ಲಿ ಘಟನೆಯನ್ನು ಪ್ರಥಮ್ ವಿವರಿಸಿ ಬರೆದುಕೊಂಡಿದ್ದಾರೆ.

ಪ್ರಥಮ್​ ತಮ್ಮ ಎಕ್ಸ್​​ ಖಾತೆಯಲ್ಲಿ ” ಸಂಜೆ ಗ್ರಾಮಾಂತರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಆಪ್ತರೊಟ್ಟಿಗೆ ಊಟಕ್ಕೆ ಕೂತಿದ್ದೆ. ಕೆಲವರು ಫೋಟೋ ತಗೊಂಡ್ರು; ಜೈ ಡಿ ಬಾಸ್ ಅಂತ ಬಲವಂತವಾಗಿ ಕೂಗೋಕೆ ಹೇಳಿ ಗಲಾಟೆ ಕೂಗಿದ್ರು; ಒಳ್ಳೇದಾಗ್ಲಪ್ಪ ಅಂದೆ; ಅಶ್ಲೀಲ ಪದ ಬಳಸಿ ಕೈ ಮೀಲಾಯಿಸೋಕೆ ಬಂದ್ರು. ಅಲ್ಲಿದ್ದ 8 ಜನ ಬೌನ್ಸರ್‌ ಆ ಗೂಂಡಾಗಳನ್ನು ಎಳೆದು ಹೊರಗೆ ತಳ್ಳಿದ್ರು; ಕ್ಷಮೆ ಕೇಳಿದ್ರು. ಬಿಟ್ಟಿದ್ದೀನಿ”

“ಹೋಟೆಲ್‌ನ ಎಲ್ಲಾ ಸಿಬ್ಬಂದಿ ಹಾಗೂ ಮ್ಯಾನೇಜರ್‌ ಮನವಿ ಮೇರೆಗೆ ನಾನು ಕಂಪ್ಲೇಂಟ್ ಕೊಡಬಾರದು ಅಂತ ನಿರ್ಧರಿಸಿದೆ. ನಮ್ಮ ಪಾಡಿಗೆ ನಾವಿದ್ದೇವೆ ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವ್ರ ಪಾಡಿಗೆ ಇದ್ದಾರೆ ಆದರೆ ಈ ಮಿನಿ ಗೂಂಡಾಗಳ ನಿಗರಾಟ ನೋಡೋಕಾಗ್ತಿಲ್ಲ. ಹೇಗಿದ್ರೂ ಹೋಟೆಲ್‌ನಲ್ಲಿ ಸಿಸಿಟಿವಿ ಇದೆ. ಇದು ಹೀಗೆ ಮುಂದುವರೆದರೆ ನಾನಂತು ಸುಮ್ಮನೆ ಕೂರಲ್ಲ. ಈ ದರ್ಶನ್ ಸರ್ ಅವರ ಪಾಡಿಗೆ ಅವರಿದ್ರೂ ಈ ಮಿನಿ ಗೂಂಡಗಳು ನೆಮ್ಮದಿಯಾಗಿರೋಕೆ ಬಿಡಲ್ಲ ಅನ್ಸುತ್ತೆ. ಎಲ್ಲವೂ ಸಿಸಿಟಿವಿ ರೆಕಾರ್ಡ್ ಆಗಿದೆ ಒತ್ತಾಯದಿಂದ ಜೈ ಡಿ ಬಾಸ್ ಅನ್ನಿಸೋದು ಬಲವಂತವಾಗಿ ಅಶ್ಲೀಲ ಪದ ಬಳಸೋದು ನೋಡ್ತಾ ಇರೋಕಾಗಲ್ಲ. ನಾನು ಒಂದು ಕಂಪ್ಲೇಂಟ್ ಕೊಟ್ರೆ ಕಂಬಿ ಎಣಿಸಬೇಕಾಗುತ್ತದೆ. ಮುಚ್ಕೊಂಡು ಮೈ ಬಗ್ಗಿಸಿ ದುಡಿದು ಚೆನ್ನಾಗಿ ಬದುಕಿ”

“ಇದು 2ನೇ ಟೈಂ ಆಗುತ್ತಿರುವುದು. ನಾನು ಒಂದು ಕಂಪ್ಲೇಂಟ್ ಕೊಟ್ರೆ ಚೈಲು ಕೇಸ್ ಅಂತ ಅಲಿಬೇಕಾಗುತ್ತದೆ. ಅಲ್ಲಿದ್ದ ನಾಲ್ಕು ಪುಡಿರೌಡಿಗಳ ಫ್ಯಾಮಿಲಿ ನೆನಪಿಸಿಕೊಂಡು ಸುಮ್ಮನಿದ್ದೀನಿ. ಕಿರುಚಾಡಿದ್ದ ವಿಡಿಯೋ, ಮಿಸ್‌ ಬಿಹೇವ್‌ ಮಾಡಿದ್ದು ಎಲ್ಲವೂ ಇದೆ. ಸುಮ್ಮನೆ ಮುಚ್ಕೊಂಡು ಇರೋಕೆ ಏನೋ ರೋಗ ನಿಮ್ಗೆ? ಬದುಕು ಸುಂದರವಾದದ್ದು ಹಾಳು ಮಾಡಿಕೊಳ್ಳಬೇಡಿ” ಎಂದು ಡಿ ಗ್ಯಾಂಗ್​​ ಗೂಂಡಾಗಳಿಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES