Wednesday, January 22, 2025

ಜಮೀರ್​ ಮಾತಿನಿಂದ ನಿಖಿಲ್​ ಗೆಲ್ಲುವ ಅಂತರ ಹೆಚ್ಚಾಗಲಿದೆ : ಅಶ್ವತ್​ ನಾರಯಣ್​​

ಬೆಂಗಳೂರು : ನಗರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಅಶ್ವತ್​ ನಾರಾಯಣ್​​ ಚನ್ನಪಟ್ಟಣದ ಉಪಚುನಾವಣೆ ಬಗ್ಗೆ ಮಾತನಾಡಿದರು. ಚನ್ನಪಟ್ಟಣ ಫಲಿತಾಂಶ ಬಗ್ಗೆ ಯೋಗೇಶ್ವರ್ ನಿರಾಸೆಯಾಗಿ ಮಾತಾಡಿದ ಹಿನ್ನೆಲೆ ಹೇಳಿಕೆ ನೀಡಿದರು.

ಚನ್ನಪಟ್ಟಣ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್​ನವರು ನಿರಾಶರಾಗಿದ್ದಾರೆ. ಏನೂ ಅಭಿವೃದ್ಧಿ ಮಾಡದ ಈ ಸರ್ಕಾರವನ್ನು ಜನ ತಿರಸ್ಕರಿಸ್ತಾರೆ ಬೈಎಲೆಕ್ಷನ್ ಗಳಲ್ಲಿ ಸರ್ಕಾರ ಇದ್ದವರು ರಣತಂತ್ರ ಮಾಡೋದು ಸಹಜ
ಆದರೆ ಈ ಬಾರಿ ಮೂರೂ ಕಡೆಯೂ ಕಾಂಗ್ರೆಸ್​ ಸರ್ಕಾರವನ್ನ ಜನ ತಿರಸ್ಕರಿಸ್ತಾರೆ. ಯೋಗೇಶ್ವರ್ ಯಾವಾಗ ಕಾಂಗ್ರೆಸ್ ಕಡೆಗೆ ಕಾಲಿಟ್ರೋ ಆಗಲೇ ಅವರ ಪತನ ಶುರುವಾಯ್ತು ಅಲ್ಲೀವರೆಗೂ ಅವರ ಪರ ಇದ್ದ ವಾತಾವರಣ ನಂತರ ಉಲ್ಟಾ ಆಯ್ತು ಎಂದು ಹೇಳಿದರು.

ಜಮೀರ್​ ಬಗ್ಗೆ ಅಶ್ವತ್​ನಾರಯಣ್​​ ಮಾತು!

ಜಮೀರ್ ಅಹಮದ್ ಯಾವಾಗಲೂ ವಿವಾದಾತ್ಮಕ ಹೇಳಿಕೆ‌ ಕೊಡ್ತಾರೆ ಎಂದ ಅಶ್ವತ್​ನಾರಯಣ್​​, ಜಮೀರ್ ಹೇಳಿಕೆ ಯೋಗೇಶ್ವರ್​ಗೂ ಮಾರಕ ಆಗಿರಬಹುದು ಖಂಡಿತ ಜಮೀರ್ ಹೇಳಿಕೆ ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಪಾಠ ಕಲಿಸುತ್ತೆ ಇಡೀ ದೇವೇಗೌಡರ ಕುಟುಂಬ ಖರೀದಿ ಮಾಡೋದಾಗಿ ಜಮೀರ್ ಹೇಳಿಕೆಯಿಂದ ಜನ ಬೇಜಾರ್ ಆಗಿದ್ದಾರೆ. ಜಮೀರ್ ಮಾತು ನಿಖಿಲ್ ಗೆಲ್ಲುವ ಮಾರ್ಜಿನ್ ಖಂಡಿತ ಹೆಚ್ಚಿಸುತ್ತೆ ಎಂದು ಚನ್ನಪಟ್ಟಣದಲ್ಲಿ ಮೈತ್ರಿ ಕೂಟ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದರು.

RELATED ARTICLES

Related Articles

TRENDING ARTICLES