ಮೈಸೂರು : ಆರ್ಟಿಐ ಕಾರ್ಯಕರ್ತ ಸ್ನೇಹಮಹಿ ಕೃಷ್ಣನ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದೂರು ನೀಡಿದ್ದು. ಮೈಸೂರಿನ ಲಕ್ಷ್ಮೀಪುರಂ ಫೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಮೂಡ ಪ್ರಕರಣ ಪ್ರಮುಖ ದೂರುದಾರರಾಗಿರುವ ಸ್ನೇಹಮಹಿ ಕೃಷ್ಣ ರೌಡಿಶೀಟರ್, ಆತನ ಮೇಲೆ 44 ಕೇಸ್ಗಳಿವೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದ್ದು. ಆತನ ಮೇಲೆ ಮೂರುವರೆ ವರ್ಷಗಳಿಂದ ಯಾವುದೇ ಸೆಕ್ಯೂರಿಟಿ ಕೇಸ್ ಹಾಕಿಲ್ಲ.ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ದಾಖಲೆ ಬಿಡುಗಡೆ ಮಾಡ್ತಿದ್ದಾನೆ. ಸಾರ್ವಜನಿಕ ವಲಯದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ.ಈತನನ್ನ ಕೂಡಲೇ ಅರೆಸ್ಟ್ ಮಾಡಬೇಕು ಎಂದು ದೂರು ನೀಡಲಾಗಿದೆ.
ರೌಡಿಶೀಟರ್ ಆಗಿರೋ ಈತ ಸಿಎಂ ಪತ್ನಿ ಪಾರ್ವತಿ ಹೆಸರಲ್ಲಿ ಸುಳ್ಳು ದಾಖಲೆ ನೀಡಿದ್ದಾನೆ. ಆತ ಬಿಡುಗಡೆ ಮಾಡಿರೋ ಚಲನ್ ಹಣ ಕಟ್ಟಿರೋ ದಾಖಲೆ ಸುಳ್ಳು ಎಂದಿರುವ ಲಕ್ಷ್ಮಣ್ ಆತನನ್ನು ಕೂಡಲೇ ಅರೆಸ್ಟ್ ಮಾಡಬೇಕು ಅರೆಸ್ಟ್ ಮಾಡದಿದ್ದರೆ ನಾಳೆಯಿಂದ ಧರಣಿ ಸತ್ಯಾಗ್ರಹ ಮಾಡ್ತೀವಿ ಎಂದು ಎಚ್ಚಿರಿಕೆ ನೀಡಿದ್ದಾರೆ. ಅದರ ಜೊತೆಗೆ ಸ್ನೇಹಮಯಿ ಕೃಷ್ಣನ ವಿರುದ್ದವಾಗಿ ದಾಖಲಾಗಿರುವ ಸುಮಾರು 22 ಎಫ್ಐಆರ್ ಕಾಫಿಗಳನ್ನು ಬಿಡುಗಡೆ ಮಾಡಿದ್ದಾರೆ.