Sunday, December 22, 2024

ಅಕ್ರಮ ಆಸ್ತಿಗಳಿಕೆ ಆರೋಪ : ಜಮೀರ್​ಗೆ ಲೋಕಾಯುಕ್ತ ನೋಟಿಸ್​​

ಬೆಂಗಳೂರು : ಅಕ್ರಮ ಆಸ್ತಿಗಳಿಕೆ ಆರೋಪದಲ್ಲಿ ಸಚಿವ ಜಮೀರ್​ ಅಹಮದ್​​ಖಾನ್​ಗೆ ಲೋಕಾಯುಕ್ತದಿಂದ ನೋಟಿಸ್​ ನೀಡಿದ್ದು. ವಿಚಾರಣೆಗೆ ಹಾಜರಾಗುವಂತೆ ಖುದ್ದು ಲೋಕಾಯುಕ್ತ ಇನ್ಸ್​​ಪೆಕ್ಟರ್​​ ಮನೆಗೆ ಬಂದು ನೋಟಿಸ್​​ ನೀಡಿ ಹೋಗಿದ್ದಾರೆ.

ಬಂಬೂಬಜಾರ್ ನಲ್ಲಿರೋ ಮನೆ ಹಾಗೂ ಕಲಾಸಿಪಾಳ್ಯದ ಕಚೇರಿ ಮೇಲೆ‌ ದಾಳಿ ನಡೆಸಿ ಕೇಸ್ ದಾಖಲಿಸಿದ್ದ ಎಸಿಬಿ. ನಂತರ ಎಸಿಬಿ ತನಿಖಾ ಸಂಸ್ಥೆ ರದ್ದಾದ ಬಳಿಕ ಪ್ರಕರಣವನ್ನು ಲೋಕಾಯುಕ್ತಗೆ ವರ್ಗಾವಣೆ ಮಾಡಿದ್ದರು. ಇದರ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಡಿಸೆಂಬರ್​ 03ರಂದು ವಿಚಾರಣೆಗೆ ಹಾಜರಾಗುವಂತೆ ಜಮೀರ್​​ಗೆ ನೋಟಿಸ್​​ ನೀಡಿದ್ದಾರೆ.

RELATED ARTICLES

Related Articles

TRENDING ARTICLES