Sunday, December 22, 2024

ಎಲಾನ್‌ ಮಸ್ಕ್​ನ ಸ್ಪೇಸ್​ ಎಕ್ಸ್​​ ಜೊತೆ ಕೈ ಜೋಡಿಸಿದ ISRO

ಸ್ಪೇಸ್‌ ಎಕ್ಸ್‌ ಮೂಲಕ ಮಹತ್ವದ ಉಪಗ್ರಹ ಉಡಾವಣೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ತನ್ನ ಉಪಗ್ರಹ ಉಡಾವಣೆಗೆ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ನೆರವು ಪಡೆಯಲಿದೆ.

ಬಿಲಿಯನೇರ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಕಂಪನಿಗೆ ಸೇರಿದ ಫಾಲ್ಕನ್‌ 9 ಉಡಾವಣಾ ವಾಹಕದ ಮೂಲಕ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಜಿಸ್ಯಾಟ್‌-ಎನ್‌2 ಹಾಗೂ ಜಿಸ್ಯಾಟ್‌-20 ಹೆಸರಿನ ಉಪಗ್ರಹಗಳನ್ನು ಫಾಲ್ಕನ್‌ 9 ಮೂಲಕ ಉಡಾವಣೆ ಮಾಡಲಿದೆ. ಇದು ಭಾರತದಲ್ಲಿ ವಿಮಾನಯಾನದ ವೇಳೆ ಇಂಟರ್‌ನೆಟ್‌ ಬಳಸಲು ನೆರವಾಗಲಿದೆ.

ಭಾರತದ ಸ್ವಂತ ಉಪಗ್ರಹ ಉಡಾವಣಾ ವಾಹಕ ಮಾರ್ಕ್‌-3 ಗರಿಷ್ಠ 4,000 ಕೆಜಿ ತೂಕ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ವರ್ಗಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಜಿಸ್ಯಾಟ್‌-ಎನ್‌2 ಉಪಗ್ರಹದ ತೂಕ 4,700 ಕೆಜಿ ಇದೆ. ಹೀಗಾಗಿ ಇಸ್ರೋ ಸ್ಪೇಸ್‌ ಎಕ್ಸ್‌ನ ಉಡಾವಣಾ ವಾಹಕವನ್ನು ಬಳಸಿಕೊಳ್ಳುತ್ತಿದೆ.

ಜಿಸ್ಯಾಟ್‌ ಎನ್‌2 ಉಪಗ್ರಹವು 14 ವರ್ಷಗಳ ಜೀವಿತಾವಧಿ ಹೊಂದಿದೆ. ಭಾರತದ ಸುಧಾರಿತ ಸಂವಹನ ಮೂಲಸೌಕರ್ಯದಲ್ಲಿ ಇದು ಪ್ರಮುಖ ಉಪಗ್ರಹವಾಗಿದೆ. ಇದು 32 ಯೂಸರ್‌ ಬೀಮ್‌ಗಳನ್ನು ಹೊಂದಿದ್ದು, 8 ನ್ಯಾರೋ ಸ್ಪಾಟ್‌ ಬೀಮ್ಸ್‌ ಹಾಗೂ 24 ವೈಡ್‌ ಸ್ಪಾಟ್‌ ಬೀಮ್‌ಗಳನ್ನು ಹೊಂದಿದ್ದು, ಸಂಪೂರ್ಣ ಭಾರತವನ್ನು ಕವರ್‌ ಮಾಡಲಿದೆ. ಈ ಬೀಮ್‌ಗಳನ್ನು ಹಬ್‌ ಸ್ಟೇಷನ್‌ಗಳು ಬೆಂಬಲಿಸಲಿದ್ದು, ಇವು ಭಾರತದ ಒಳಗೆ ಇರಲಿವೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES