Sunday, December 22, 2024

ಮೋದಿ ತರುತ್ತಿರುವ ತಿದ್ದುಪಡಿಗೆ ಬೆಂಬಲಿಸಿದರೆ ವಕ್ಫ್ ಬೋರ್ಡ್ ಆಟ ನಿಲ್ಲುತ್ತದೆ:ಪ್ರಮೋದ್​ ಮುತಾಲಿಕ್​

ರಾಯಚೂರು : ರೈತರನ್ನ ಒಕ್ಕಲೆಬಿಸಲು ವಕ್ಫ್ ಬೋರ್ಡ್ ವಕ್ಕರಿಸಿದೆ. ಲಿಂಗಸುಗೂರಿನಲ್ಲಿ ವೈರಸ್, ಕ್ಯಾನ್ಸರ್ ನಂತೆ ವಕ್ಫ್ ಬೋರ್ಡ್ ಹರಡಿದೆ ಎಂದು ಶ್ರೀರಾಮ ಸೇನೆ ಪ್ರಮುಖ ಪ್ರಮೋದ್ ಮುತಾಲಿಕ್ ರಾಯಚೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಪ್ರಮೋದ್​ ಮುತಾಲಿಕ್​​ ಹೇಳಿಕೆ ನೀಡಿದ್ದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸುಮಾರು 1,700 ಎಕರೆಯಷ್ಟು ಜಮೀನು ವಕ್ಫ್​ ಇದೆ ಎಂದು ತೋರಿಸುತ್ತಿದೆ. ಸಿಎಂ ಈ ಒಂದು ಪ್ರಕ್ರಿಯೆಯನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದರು. ಜನರ ಪಹಣಿಗಳಲ್ಲಿ ಇಂದಿಗೂ ವಕ್ಫ್ ಬೋರ್ಡ್ ಹೆಸರು ಬರುತ್ತಿದೆ. ಮುಖ್ಯಮಂತ್ರಿಗಳೇ ನೀಮ್ಮ ಹೇಳಿಕೆಯನ್ನ ಇವರು ಪಾಲಿಸುತ್ತಿಲ್ಲವೋ.
ನಿಮ್ಮ ಹೇಳಿಕೆಯೇ ನಾಟಕವು ಎಂಬುದು ಬಹಿರಂಗಪಡಿಸಿ ಎಂದು ಅಸಮಧಾನ ವ್ಯಕ್ತಪಡಿಸಿದರು.

ನಮ್ಮ ಪಹಣಿಯಲ್ಲಿ ಹೆಸರು ಇಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಬೇಡಿ ನಿಮ್ಮ ಬುಡಕು ಬರುತ್ತೆ. ನರೇಂದ್ರ ಮೋದಿಯವರು ತಿದ್ದುಪಡಿ ತರುವವರೆಗೂ ನಮ್ಮ ತಲೆ ಮೇಲೆ ಕತ್ತಿಯಂತೆ ವಕ್ಫ್ ಬೋರ್ಡ್ ಇರುತ್ತೆ. ನರೇಂದ್ರ ಮೋದಿಯವರು ಜಾರಿ ಮಾಡುತ್ತಿರುವ ಬಿಲ್​ಗೆ ನಾವೆಲ್ಲರೂ ಬೆಂಬಲಿಸಬೇಕು. ನಿಮ್ಮ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬಂದಿದ್ದರೆ ಕೋರ್ಟಿಗೆ ಹೋಗಬೇಡಿ, ನಿಮ್ಮ ಹಣ ಖರ್ಚು ಮಾಡಬೇಡಿ. ಯಾವ ಆಧಾರದ ಮೇಲೆ ವಕ್ಫ್ ಬೋರ್ಡ್ ಹೆಸರು ಹಾಕಿದ್ದೀರಿ ಎಂದು ತಹಶಿಲ್ದರ್ ಗೆ ಪ್ರಶ್ನೆ ಮಾಡಿ ಪ್ರಶ್ನೆ ಮಾಡಿದರೆ ಅವರೇ ವಾಪಸ್ ಪಡೆದು ಹೊಸ ಪಹಣಿ ಕೊಡುತ್ತಾರೆ ಎಂದು ಹೇಳಿದರು.

ನರೇಂದ್ರ ಮೋದಿ ತರುತ್ತಿರುವ ತಿದ್ದುಪಡಿಗೆ ಬೆಂಬಲಿಸಿದರೆ ವಕ್ಫ್ ಬೋರ್ಡ್ ಆಟ ನಿಲ್ಲುತ್ತದೆ. ಮಠ ಮಂದಿರ ಹಿಡಿದು ವಿಧಾನ ಸೌಧವೇ ನಮ್ಮ ಆಸ್ತಿ ಎನ್ನುವ ದಾಷ್ರ್ಯೆ, ದುಷ್ಟತನ, ನೀಚತನದಿಂದ ವಕ್ಫ ಬೋರ್ಡ ಸೊಕ್ಕನ್ನ ತೋರಿಸುತ್ತಿದೆ.. ಈ ಸೊಕ್ಕನ್ನು ಮುರಿಯಲು ಎಲ್ಲಾ ಮಠಾಧೀಶರು, ಧರ್ಮದರ್ಶಿಗಳು, ಅರ್ಚಕರು,‌ ಜನ ಒಟ್ಟಾಗಿ ವಿರೋಧಿಸಬೇಕಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES