Sunday, December 22, 2024

ರಾಜ್ಯ ಬಿಜೆಪಿ ಅವಧಿಯಲ್ಲಿನ ಕೋವಿಡ್​​ ಹಗರಣವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಮುಂದಾದ ಕಾಂಗ್ರೆಸ್​

ಬೆಂಗಳೂರು: ಕಳೆದ ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಕೋವಿಡ್​ ಹಗರಣವನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್​ ಮುಂದಾಗಿದ್ದು. ಇದರಿಂದ ಬಿಜೆಪಿಗೆ ಮುಜುಗರ ತರಬೇಕು ಎಂದು ಯೋಜನೆ ರೂಪಿಸಿಕೊಂಡಿದೆ.

ಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಹಗರಣವನ್ನು ಪ್ರಸ್ತಾಪಿಸಲು ಚಿಂತನೆ ನಡೆಸಿದ್ದು. ಸಂಸತ್ ನಲ್ಲಿ ಪ್ರಸ್ತಾಪಿಸಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಮುಜುಗರ ತರಲು ಯೋಜನೆ ರೂಪಿಸಿಕೊಂಡಿದೆ. ಕರ್ನಾಟಕದ ನಿಮ್ಮ ಸರ್ಕಾರ ಮಾಡಿದ ಘನಘೋರ ಅಪರಾಧವಿದು ಎಂದು ಹೇಳಿ ಇದರ ಬಗ್ಗೆ ಯಾಕೆ ನೀವು ಬಾಯಿ ಬಿಡ್ತಿಲ್ಲವೆಂದು ಛೇಡಿಸಲು ಚಿಂತನೆ ನಡೆಸಿದೆ.

ಈಗಾಗಲೇ ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರ ಗಮನಕ್ಕೆ ಕೈ ನಾಯಕರು ತಂದಿದ್ದು. ಜಸ್ಟೀಸ್ ಕುನ್ಹಾ ಕೊಟ್ಟ ಮಧ್ಯಂತರ ವರದಿಯ ಅಂಶಗಳನ್ನು ಮತ್ತು ಪರಿಕರಗಳ ಖರೀದಿಯಲ್ಲಿನ ಅಕ್ರಮವನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಈ‌ಬಗ್ಗೆ ಪ್ರಸ್ತಾಪ ಮಾಡಿ ಬಿಜೆಪಿಗೆ ಮುಜುಗರ ತರಲು ಕಾಂಗ್ರೆಸ್​ ಯೋಜನೆ ರೂಪಿಸಿಕೊಂಡಿದೆ.

 

RELATED ARTICLES

Related Articles

TRENDING ARTICLES