Wednesday, January 22, 2025

ಯತ್ನಾಳ್​ ನಮ್ಮ ಪಕ್ಷದವರೆ ಅವರ ಜೊತೆಗೆ ವಕ್ಷ್​ ವಿರುದ್ದ ಹೋರಾಟ ನಡೆಸುತ್ತೇವೆ : ಬಿವೈ. ವಿಜಯೇಂದ್ರ

ಬೆಂಗಳೂರು : ರಾಜ್ಯದಲ್ಲಿ ವಕ್ಷ್​ ಕುರಿತಾದ ಹೋರಾಟಗಳು ತಣ್ಣಗಾಗುವ ಯಾವುದೇ ವಿಚಾರಗಳು ಕಾಣುತ್ತಿಲ್ಲ. ಚಳಿಗಾಲದ ಅಧಿವೇಶನ ಹತ್ತಿರವಾಗುತ್ತಿದ್ದಂತೆ ರಾಜ್ಯ ಬಿಜೆಪಿ ಘಟಕದಿಂದ ಹೋರಾಟವನ್ನು ತೀವ್ರಗೊಳಿಸಲು ಯೋಜನೆ ರೂಪಿಸಿದ್ದು. ಇದರ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ವಕ್ಪ್ ಆಸ್ತಿ ವಿವಾದದ ಕುರಿತು ಯತ್ನಾಳ್ ಟೀಮ್ ನಿಂದ ಪ್ರತ್ಯೇಕ ಹೋರಾಟ ವಿಚಾರವಾಗಿ ಹೇಳಿಕೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ  ವಕ್ಪ್ ಬಗ್ಗೆ ಎರಡು ಹಂತಗಳಲ್ಲಿ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಆಗಿದೆ, ಅಧಿವೇಶನ ಪ್ರಾರಂಭ ಆಗುವ ದಿನ ಬೆಳಗಾವಿಯಲ್ಲಿ ರೈತರ ಸೇರಿಸಿ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಒಟ್ಟಾರೆಯಾಗಿ ಪಕ್ಷ ನಿರ್ಧಾರ ಮಾಡಿದೆ, ನಿಶ್ಚಯ ಮಾಡಿದ್ದೇವೆ ಎರಡು ಹಂತಗಳ ಹೋರಾಟಕ್ಕೆ ಮೂರು ತಂಡಗಳು ಕೂಡ ರಚನೆಯಾಗಿದೆ ಇವತ್ತು ಅಥವಾ ನಾಳೆ ನಮ್ಮ ಮುಖಂಡರು ಅದರ ಬಗ್ಗೆ ತಿಳಿಸುತ್ತಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ವಿಜಯೇಂದ್ರ, ರೈತರು ಪರವಾದ ಹೋರಾಟ ಮಾಡಿದಾಗ ಮುಜುಗರ ಯಾಕೆ ಪಟ್ಕೊಬೇಕು..? ರೈತರ ಪರವಾಗಿ ಯಾರು ಬೇಕಾದರೂ ಹೋರಾಟ ಮಾಡಬಹುದು.. ಅದಕ್ಕೆ ನಮ್ಮದೇನು ತಕರಾರು ಇಲ್ಲಎಂದರು. ಯತ್ನಾಳ್ ಟೀಮ್ ನ ಹೋರಾಟಕ್ಕೆ ತಮ್ಮ ಒಪ್ಪಿಗೆ ಇದೆಯಾ ಎಂಬ ಪ್ರಶ್ನೆಗೆ
ನಾವು ಎರಡು ಹಂತಗಳಲ್ಲಿ ಹೋರಾಟದ ಬಗ್ಗೆ ತೀರ್ಮಾನ ಮಾಡಿದ್ದೇವೆ ಹೋರಾಟದ ಬಗ್ಗೆ ಗಟ್ಟಿಯಾಗಿ ನಿರ್ಧಾರ ತಗೊಳ್ತೇವೆ ಎಂದು ಹೇಳಿದರು.

ನಿಮ್ಮ ತಂಡದಲ್ಲಿ ಯತ್ನಾಳ್, ರಮೇಶ್ ಇರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ‘ಯತ್ನಾಳ್ ನಮ್ಮ ಪಕ್ಷದವರೇ ತಾನೇ ಎಲ್ಲಾ ಶಾಸಕರು ಇರ್ತಾರೆ, ಹಿರಿಯರು ಇರ್ತಾರೆ, ರಾಜ್ಯದಲ್ಲಿ ರೈತರ ಪರವಾಗಿ ಯಾರು ಹೋರಾಟ ಮಾಡಿದ್ರೂ, ಅದಕ್ಕೆ ನಮ್ಮ ಬೆಂಬಲ ಇದೆ, ರೈತರ ವಿಷಯದಲ್ಲಿ ಬಿಜೆಪಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ ಈಗಾಗಲೇ ಹಿರಿಯರ ತಂಡ ರಚನೆ ಆಗಿದೆ ಇದರ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ವಿಜಯೇಂದ್ರ‌ ಹೇಳಿದರು.

RELATED ARTICLES

Related Articles

TRENDING ARTICLES