Wednesday, January 22, 2025

‘ಆಧಾರ್’​ ಮಾಡಿಸಲು ಬಂದ ಮಹಿಳೆಯ ಮೇಲೆ ಮೊಬೈಲ್​ ಕಳ್ಳತನದ ಆರೋಪ ಹೊರಿಸಿದ ಸಿಬ್ಬಂದಿಗಳು

ಬಾಗಲಕೋಟೆ : ಜಿಲ್ಲೆಯ ತಹಶೀಲ್ದಾರ್​​ ಕಚೇರಿಯಲ್ಲಿ  ಆಧಾರ್​ ಕಾರ್ಡ್​ ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯನ್ನು ಮೊಬೈಲ್​ ಕಳ್ಳತನದ ಆರೋಪ ಹೊರಿಸಿ ಆಕೆಯನ್ನು ಕೂಡಿಹಾಕಿ ಹಿಂಸೆ ಕೊಟ್ಟ ಘಟನೆ ಇಳಕಲ್​ ತಹಶೀಲ್ದಾರ್​ ಕಛೇರಿಯಲ್ಲಿ ನಡೆದಿದೆ.

ಇಳಕಲ್ ತಹಶೀಲ್ದಾರ್ ಕಚೇರಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು. ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ತಹಶೀಲ್ದಾರ್ ಕಚೇರಿಗೆ ಬಂದಿದ್ದ ಮಹಿಳೆಯ ಮೇಲೆ ಕಛೇರಿಯ ಮೊಬೈಲ್​ ಕಳ್ಳತನ ಮಾಡಿದ ಆರೋಪ ಹೊರಿಸಿ ಮಹಿಳೆಯನ್ನು ಕೂಡಿಹಾಕಿದ್ದಾರೆ. ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ಮಹಿಳೆಯನ್ನು ಕೂಡಿ ಹಾಕಿ ಹಾಕಿದ್ದಾರೆ.

ನಂತರ ಮೊಬೈಲ್​ ಸಿಕ್ಕ ಹಿನ್ನಲೆ ಮಹಿಳೆಯನ್ನು ಮನೆಗೆ ಕಳುಹಿಸಿದ್ದಾರೆ. ಕುಚೇಷ್ಟೆ ಮಾಡಲೆಂದು ಕಚೇರಿಯಲ್ಲಿನ ಮತ್ತೊಬ್ಬ ಸಿಬ್ಬಂದಿ ಮೊಬೈಲ್​ ತೆಗೆದುಕೊಂಡು ಹೋಗಿದ್ದನು ಎಂದು ಮಾಹಿತಿ ದೊರೆತಿದೆ.  ಮಹಿಳೆಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟ ವಿಷಯ ತಿಳಿಯುತ್ತಿದ್ದಂತೆ ದಲಿತ ಸಂಘಟನೆ ಕಚೇರಿಗೆ ಮುತ್ತಿಗೆ ಹಾಕಿದ್ದು ತಹಶೀಲ್ದಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES