Sunday, December 22, 2024

ರಾಮಲಿಂಗಾರೆಡ್ಡಿ ಕರ್ನಾಟಕದ ಬಂಗಾರದ ಮನುಷ್ಯ: ಸಂತೋಶ್​ ಲಾಡ್​​

ಹುಬ್ಬಳ್ಳಿ : ಇಂದು (ನ.15) ಹುಬ್ಬಳ್ಳಿಯಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಶ್​​ ಲಾಡ್​ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರನ್ನು ಕರ್ನಾಟಕದ ಬಂಗಾರದ ಮನುಷ್ಯ ಎಂದು ಸಂಭೋಧಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಂತೋಶ್​ ಲಾಡ್​ ರಾಮಲಿಂಗಾರೆಡ್ಡಿ ಕರ್ನಾಟಕದ ಬಂಗಾರದ ಮನುಷ್ಯ, ಅತ್ಯಂತ ಸರಳ ಜೀವಿ ಎಂದು ಹೇಳಿದರು ಹಾಗೇಯೆ ರಾಮಲಿಂಗಾರೆಡ್ಡಿ ಸೋಲಿಲ್ಲದ ಸರದಾರ‌ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸಂತೋಶ್​ ಲಾಡ್​, ಇವತ್ತು NWKSRTC ಈ ಮಟ್ಟಕ್ಕೆ ಬೆಳೆಯಲು ಕಾರಣ ಸಂಸ್ಥೆಯ ನೌಕರರು ಎಂದು ಅವರಿಗೆ ಅಭಿನಂದನೆ ಹೇಳಿದರು. ಆನ್​ಡ್ಯೂಟಿ ಯಲ್ಲಿ ಜೀವ ಕಳೆದುಕೊಂಡರೆ ಪರಿಹಾರ ಕೊಡೋದು ಎಲ್ಲೂ ಇಲ್ಲ ಇದ್ರೆ ಅದು ಕರ್ನಾಟಕದಲ್ಲಿ ಮಾತ್ರ ಇದೆ ಗ್ರ್ಯಾಚೂಟಿ ಹಣ ಪೆಂಡಿಂಗ್ ಇದೆ
ನಮ್ಮದು ನುಡಿದಂತೆ ನಡೆದ ಸರ್ಕಾರ.ನಮ್ಮ ವಿಭಾಗಕ್ಕೆ 500 ಕ್ಕೂ ಹೆಚ್ಚು ಬಸ್ ಕೊಟ್ಟಿದ್ದಾರೆ.
ಐದು ಯೋಜನೆಯಲ್ಲಿ ಶಕ್ತಿ ಯೋಜನೆ ಅತ್ಯಂತ ಪ್ರಮುಖ ಯೋಜನೆ ಎಂದು ಹೇಳಿದರು.

ಹೆಣ್ಮಕ್ಕಳಿಗೆ ಇಂತಹ ಅವಕಾಶ ಕೊಟ್ಟಿದ್ದು,ಸಿದ್ದರಾಮಯ್ಯ ಸರ್ಕಾರ, ರಾಮಲಿಂಗಾರೆಡ್ಡಿ ಸರ್ಕಾರ ವಿರೋಧಿಗಳು ಮೊದಲಿನಿಂದಲೂ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ರು. ಆದರೆ ಸರ್ಕಾರ ಬಂದಾಗಿಂದ ಈ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಜಿಡಿಪಿಯಲ್ಲಿ ಕರ್ನಾಟಕ ನಂಬರ್ 1ಆಗಿದೆ ಗುಜರಾತ್ ಯಾವುದರಲ್ಲಿ ನಂಬರ್ ಒನ್ ಇದೆ, ಬಿಜೆಪಿಯವರು ಬರೀ ಸುಳ್ಳು ಹೇಳಿ ಗುಜರಾತ್ ಮಾರ್ಕೆಟ್ ಮಾಡಿದ್ದಾರೆ.ಶಿಕ್ಷಣ ಇರಲಿ ಯಾವ ಕ್ಷೇತ್ರದಲ್ಲೂ ಗುಜರಾತ್ ನಂಬರ್ 1 ಇಲ್ಲ ಎಂದು ಹೇಳಿದರು ಅದರ ಜೊತೆಗೆ ಧಾರವಾಡಕ್ಕೆ ಇನ್ನು ಹೆಚ್ಚಿನ ಬಸ್​ಗಳು ಬೇಕಿವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES