Wednesday, January 22, 2025

ಜಮೀರ್​ ಹೇಳಿಕೆ ಖಂಡಿಸಿ ಒಕ್ಕಲಿಗ ನಾಯಕರಿಂದ ಪ್ರತಿಭಟನೆ : ರಾಜೀನಾಮೆಗೆ ಆಗ್ರಹ

ನೆಲಮಂಗಲ: ಸಚಿವ ಜಮೀರ್ ಅಹಮದ್ ಖಾನ್​​ ವಿರುದ್ಧ ಒಕ್ಕಲಿಗ ನಾಯಕರು ಪ್ರತಿಭಟನೆ ನಡೆಸಿದ್ದು. ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಜಮೀರ್​ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ನೆಲಮಂಗಲದ ಕುಣಿಗಲ್ ಬೈಪಾಸ್ ನಲ್ಲಿ ಪ್ರತಿಭಟನೆ ನಡೆಸಿದ್ದು. ನೂರಾರು ಒಕ್ಕಲಿಗ ಸಮುದಾಯದ ಮುಖಂಡರಿಂದ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡ ಹಾಗೂ ಕುಮಾರಸ್ವಾಮಿ ವಿರುದ್ದ ಅವಹೇಳನಕಾರಿ ಪದ ಬಳಕೆ ಹಿನ್ನೆಲೆ ಆಕ್ರೋಶಗೊಂಡ ಒಕ್ಕಲಿಗರ ಸಮುದಾಯದಿಂದ ಬಾರಿ ಆಕ್ರೋಶ ವ್ಯಕ್ತವಾಗಿದ್ದು ಜಮೀರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕುಣಿಗಲ್ ಬೈಪಾಸ್ ಬಳಿ ಮಾನವ ಸರಪಳಿ ಮಾಡಿ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು.
ತುಮಕೂರು, ಬೆಂಗಳೂರು, ಮಂಗಳೂರು ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಪಕ್ಷಬೇದ ಮರೆತು ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು.
ಮಾನವ ಸರಪಳಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತತೆ ಉಂಟಾಗಿದ್ದು. ನೆಲಮಂಗಲ ಫೋಲಿಸ್​ ಠಾಣಾ ಪೋಲಿಸರು ಭದ್ರತೆ ಕಲ್ಪಸಿದ್ದಾರೆ.

RELATED ARTICLES

Related Articles

TRENDING ARTICLES