Thursday, January 23, 2025

ದೇವರ ವಿಗ್ರಹ ವಿರೂಪಗೊಳಿಸಿದ ದುಷ್ಕರ್ಮಿಗಳು: ಹಿಂದೂಪರ ಕಾರ್ಯಕರ್ತರಿಂದ ಆಕ್ರೋಶ

ಬೆಂಗಳೂರು : ರಾಜಧಾನಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹಿಂದೂ ದೇವರ ಮೂರ್ತಿಯೊಂದು ದ್ವಂಸವಾಗಿದ್ದು. ಜೀವನ್​ ಭೀಮಾನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಳಗಿನ ಜಾವ 4 ಗಂಟೆಗೆ ಬಂದ ದುಷ್ಕರ್ಮಿಯೊಬ್ಬನಿಂದ ಕೃತ್ಯವಾಗಿದೆ.

ಇಂದು (ನ.15) ಬೆಳಿಗ್ಗೆ 4ಗಂಟೆಗೆ ಕಲ್ಲನ್ನು ಹಿಡಿದು ದೇವಸ್ಥಾನ ಪ್ರವೇಶಿಸಿರುವ ದುಷ್ಕರ್ಮಿಯೊಬ್ಬ. ಸಿಸಿಟಿವಿಗೆ ಮುಖ ಕಾಣಿಸದಂತೆ ಮುಖಮುಚ್ಚಿಕೊಂಡು ದೇವಾಸ್ಥಾನಕ್ಕೆ ಪ್ರವೇಶಿಸಿ ಕಲ್ಲಿನಿಂದ ದೇವರ ವಿಗ್ರಹವನ್ನು ಹೊಡೆದು ವಿರೂಪಗೊಳಿಸಿದ್ದಾನೆ

ಘಟನೆ ಸಂಬಂಧ ಸ್ಥಳಿಯರು ಹಾಗೂ ಭಕ್ತಾದಿಗಳು ಆಕ್ರೋಶಗೊಂಡಿದ್ದು. ದುಷ್ಕರ್ಮಿಯನ್ನು ಆದಷ್ಟು ಬೇಗ ಬಂಧಿಸಬೇಕೆಂದು ಹಿಂದೂಪರ ಸಂಘಟನೆಗಳು ಆಕ್ರೋಶವ್ಯಕ್ತ ಪಡಿಸಿದ್ದಾರೆ. ಕೃತ್ಯ ಸಂಬಂಧ ಭಕ್ತಾಧಿಗಳೂ ಜೀವನಭೀಮಾನಗರ ಪೋಲಿಸ್​ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES