Wednesday, January 22, 2025

ಕುಮಾರಸ್ವಾಮಿಯಿಂದ ಅಂತರ ಕಾಯ್ದುಕೊಂಡ ಶಾಸಕ ಜಿ.ಟಿ ದೇವೇಗೌಡ

ಮೈಸೂರು : ಶಾಸಕ ಜಿ.ಟಿ ದೇವೇಗೌಡ ಜೆಡಿಎಸ್​​ನಿಂದ ಕುಮಾರಸ್ವಾಮಿಯಿಂದ ಅಂತರ ಕಾಯ್ದುಕೊಂಡಿದ್ದಾರ ಎಂಬ ಪ್ರಶ್ನೆ ಇದೀಗ ಜನರಿಗೆ ಎದುರಾಗಿದ್ದು. ಮೈಸೂರು ಭಾಗದ ಪ್ರಭಾವಿ ರಾಜಕಾರಣಿ ಜಿ.ಟಿ ದೇವೆಗೌಡ ಕುಮಾರಸ್ವಾಮಿ ಜೊತೆಗೆ ಮುನಿಸಿಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚಿಸಲಾಗುತ್ತಿದೆ.

ಮೈಸೂರು ಭಾಗದ ಪ್ರಭಾವಿ ಜೆಡಿಎಸ್ ಶಾಸಕ ಜಿ‌ಟಿ ದೇವೇಗೌಡ ಕುಮಾರಸ್ವಾಮಿ ಭಾಗಿಯಾಗುವ ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಜಿಟಿಡಿ.ಚನ್ನಪಟ್ಟಣ ಉಪ ಚುನಾವಣಾ ಪ್ರಚಾರದಿಂದಲೂ ದೂರು ಉಳಿದಿದ್ದ ದೇವೇಗೌಡ. ಚುನಾವಣಾ ಸ್ಟಾರ್​ ಪ್ರಚಾರಕರ ಪಟ್ಟಿಯಿಂದಲು ದೂರವಾಗಿದ್ದರು. ಮೈಸೂರಿನ ದಟ್ಟಗಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಯಾಗಲಿ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ‌ ಕಾರ್ಯಕ್ರಮದಲ್ಲಾಗಲಿ ಜಿ.ಟಿ ದೇವೆಗೌಡ ಬರದೆ ಇರುವುದರಿಂದ ಕುಮಾರಸ್ವಾಮಿ ಜೊತೆಗೆ ಜಿಟಿಡಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದರೂ ಜಿಟಿ. ದೇವೇಗೌಡ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು. ಅದರ ಜೊತೆಗೆ ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್​ ಮಾಡಿದ್ದರು. ದಸರಾ ಸಮಯದಲ್ಲಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದ ಜಿಟಿಡಿ ಖುದ್ದು ಕುಮಾರಸ್ವಾಮಿಗೆ ಟಾಂಗ್​​ ನೀಡಿದ್ದರು. ಅಂದಿನಿಂದಲು ಜೆಡಿಎಸ್​ ಜೊತೆಗೆ ಜಿಟಿ. ದೇವೆಗೌಡ ಅಂತರ ಕಾಯ್ದುಕೊಂಡಿದ್ದು. ಪ್ರಸ್ತುತ ಚಿತ್ರದುರ್ಗದಲ್ಲಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES