Wednesday, January 22, 2025

ಮಿತಿಮೀರಿದ ವಾಯುಮಾಲಿನ್ಯ :ದೆಹಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ‘ಆಪ್’​ ಸರ್ಕಾರ

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದ್ದು. ಸತತವಾಗಿ ಗಾಳಿಯ ಗುಣಮಟ್ಟ ಕುಸಿಯುತ್ತಲೆ ಇರುವುದರಿಂದ ದೆಹಲಿ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿ, ಆನ್​ಲೈನ್​​ ತರಗತಿಗಳನ್ನು ಆರಂಭಿಸಿದೆ.

ಸತತವಾಗಿ ಕುಸಿಯುತ್ತಿರುವ ಗಾಳಿಯ ಗುಣಮಟ್ಟವನ್ನು ಸರಿಪಡಿಸಲು ದೆಹಲಿ ಸರ್ಕಾರ ಕೆಲವು ಮುಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು. ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಮಕ್ಕಳಿಗೆ ಆನ್​ಲೈನ್​​ ತರಗತಿಗಳನ್ನು ಶುರು ಮಾಡಲಾಗಿದೆ ಎಂದು ದೆಹಲಿ ಸಿಎಂ ಆತಿಶಿ ಮಾಗಿತಿ ನೀಡಿದ್ದಾರೆ.

ವಾಯು ಮಾಲಿನ್ಯದ ವಿರುದ್ಧ NCR ನಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ 3 ಜಾರಿ ಮಾಡಲಾಗಿದ್ದು. ಅನಿವಾರ್ಯವಲ್ಲದ ನಿರ್ಮಾಣ, ಕಟ್ಟಡ ಕೆಡವುವ ಕೆಲಸಗಳಿಗೆ ಕಡಿವಾಣ ಹಾಕಲಾಗಿದೆ. BS-VI ಅಲ್ಲದ ಡೀಸೆಲ್ ಅಂತಾರಾಜ್ಯ ಬಸ್‌ಗಳು ದೆಹಲಿ ಪ್ರವೇಶ ಮಾಡುವಂತಿಲ್ಲ ಎಂದು ಆದೇಶ ನೀಡಲಾಗಿದ್ದು. ಇಂದು ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ದೊರೆತಿದೆ.

ವಾಯುಮಾಲಿನ್ಯದ ಗುಣಮಟ್ಟ ಪರಿಶೀಲನೆ ಮಾಪನಗಳು 

ಹಂತ I – ಕಳಪೆ (AQI 201-300)
ಹಂತ II – ಬಹಳ ಕಳಪೆ (AQI 301-400)
ಹಂತ III – ತೀವ್ರವಾದ ಹಂತ (AQI 401-450)
ಹಂತ IV – ಅತೀವ್ರ ಪ್ಲಸ್ (AQI >450)

ದೆಹಲಿಯಲ್ಲಿ ಪ್ರಸ್ತುತ 424 AQI ದಾಖಲಾಗಿದ್ದು. ಇದು ತೀವ್ರವಾದ ವಾಯುಮಾಲಿನ್ಯ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES