Thursday, December 19, 2024

ಕೋಳಿ ಕಳ್ಳತನದ ಬಗ್ಗೆ ತನಿಖೆ ಮಾಡುವ ED, CBI ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ತನಿಖೆ ನಡೆಸುತ್ತಿಲ್ಲ:ಸಿಎಂ.ಸೊರೇನ್

ಜಾರ್ಖಂಡ್ : ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು, ಉತ್ತರ ಪ್ರದೇಶದಲ್ಲಿ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ, ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮೂಲಕ ಗಳಿಸಿದ ಹಣವನ್ನು ಬಿಜೆಪಿಯು ಇತರ ರಾಜ್ಯಗಳಲ್ಲಿನ ಚುನಾವಣಾ ಪ್ರಚಾರಗಳಿಗೆ ಬಳಿಸಿಕೊಳ್ಳುತ್ತಿದೆ ಎಂದು ಆರೊಪಿಸಿದ್ದಾರೆ.

ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೊರೇನ್, ‘ಪ್ರಶ್ನೆಪತ್ರಿಕೆ ಸೋರಿಕೆಯಿಂದ ಗಳಿಸಿದ ಹಣದಿಂದ ಜಾರ್ಖಂಡ್‌ ಚುನಾವಣೆ ವೇಳೆ ಬಿಜೆಪಿ ಆಡಂಬರ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೋಳಿ ಕಳ್ಳತನದ ಪ್ರಕರಣಗಳನ್ನೂ ತನಿಖೆ ನಡೆಸುತ್ತಿರುವ ಇ.ಡಿ, ಸಿಬಿಐ, ಎನ್‌ಐಎ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ತನಿಖೆ ಆರಂಭಿಸಿಲ್ಲ. ಏಕೆಂದರೆ, ಅದರ ಹಿಂದೆ ಬಿಜೆಪಿ ಇದೆ. ಚುನಾವಣೆಗಳು ಮುಗಿದ ನಂತರ ಆ ಹಣದಿಂದಲೇ ಶಾಸಕರು, ಸಂಸದರನ್ನು ಖರೀದಿಸುತ್ತಿದೆ’ ಎಂದು ದೂರಿದ್ದಾರೆ.

RELATED ARTICLES

Related Articles

TRENDING ARTICLES