Sunday, December 22, 2024

ವಿಶ್ವದಾದ್ಯಂತ ಭರ್ಜರಿ ಓಪನಿಂಗ್​ ಕಂಡ ‘ಭೈರತಿ ರಣಗಲ್’

ಬೆಂಗಳೂರು : ಹ್ಯಾಟ್ರಿಕ್​ ಹೀರೋ ಶಿವರಾಜ್​​ಕುಮಾರ್​ ಅಭಿನಯದ ಭೈರತಿ ರಣಗಲ್​ ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡಿದ್ದು.ಕರ್ನಾಟಕದಲ್ಲಿಯು ಭೈರತಿಗೆ ಅದ್ದೂರಿ ಸ್ವಾಗತ ದೊರೆತಿದೆ. ಸೊರಗುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಶಿವಣ್ಣ ಅಭಿನಯದ ಭೈರತಿ ರಣಗಲ್​ ಸಿನಿಮಾ ಟಾನಿಕ್​ ನೀಡಿದೆ ಎಂದು ಹೇಳಬಹುದು.

ಕರುನಾಡಿನಲ್ಲಿ ಸುಮಾರು 310ಕ್ಕೂ ಹೆಚ್ಚು ಥೀಯೇಟರ್​ನಲ್ಲಿ ಸಿನಿಮಾ ರೀಲಿಸ್​ ಆಗಿದ್ದು. ರಿಲೀಸ್​ಗೂ ಮುನ್ನವೇ ಹಲವು ಥಿಯೆಟರ್​ಗಳಲ್ಲಿ ಸಿನಿಮಾದ ಟಿಕೆಟ್​​ ಖಾಲಿಯಾಗಿ ಹೌಸ್​​ಪುಲ್​​ ಬೋರ್ಡ್​ ಬೀಳುತ್ತಿದೆ.
ಬೆಂಗಳೂರಿನ 14 ಚಿತ್ರಮಂದಿರಗಳಲ್ಲಿ ಈಗಾಗಲೇ ಹೌಸ್​ಫುಲ್​​ ಬೋರ್ಡ್​ ಬಿದ್ದಿದ್ದು. ಸಿನಿಮಾ ಭರ್ಜರಿಯಾದ ಓಪನಿಂಗ್​ ಪಡೆದುಕೊಂಡಿದೆ.

ಗೀತಾ ಪಿಚ್ಚರ್ ನಿರ್ಮಾಣದ ಸಿನಿಮಾ ‘ಭೈರತಿ ರಣಗಲ್’ 1996 ನ.15ರಂದು ಶಿವಣ್ಣನ ‘ಜನುಮದ ಜೋಡಿ’ ಸಿನಿಮಾ ರಿಲೀಸ್ ಆದ ದಿನವೇ ರೀಲಿಸ್​ ಆಗುತ್ತಿದ್ದು. 28 ವರ್ಷಗಳ ನಂತರ ಅದೇ ದಿನ ಮತ್ತೆ ಸಿನಿಮಾ ಬಿಡುಗಡೆಯಗುತ್ತಿದೆ. ನರ್ತನ್ ನಿರ್ದೇಶನದ ಸಿನಿಮಾಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದರೆ.
ತಂಗಿ ಪಾತ್ರದಲ್ಲಿ ಛಾಯಾ ಸಿಂಗ್ ಅಭಿನಯಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES