Sunday, December 22, 2024

ಬ್ರ್ಯಾಂಡ್​​​​ ಬೆಂಗಳೂರಿನ ಗುಂಡಿಗಳಲ್ಲಿ ಆಟೋಗಳು ಪಲ್ಟಿಯಾಗುತ್ತಿವೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವಾಹನ ಚಾಲನೆ ಮಾಡುವ ವಾಹನ ಸವಾರರ ಗೋಳು ಹೇಳತೀರದಾಗಿದೆ. ರಸ್ತೆ ತುಂಬೆಲ್ಲಾ ಗುಂಡಿಗಳೆ ತುಂಬಿದ್ದು ಜನರು ಪ್ರತಿ ನಿತ್ಯ ಹೋಡಾಡಲು ಪರದಾಡುವಂತಾಗಿದೆ . ಇದಕ್ಕೆ ಸಾಕ್ಷಿಯಾಗಿ ನಾಗವಾರದ ಬಳಿ ಒಂದೇ ಗುಂಡಿಗೆ 2 ಆಟೋಗಳು ಬಿದ್ದು ಬ್ರ್ಯಾಂಡ್​​ ಬೆಂಗಳೂರಿ ಪ್ರಸ್ತುತ ಪರಿಸ್ಥಿತಿಗೆ ಸಾಕ್ಷಿಯಾಗಿದೆ.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರೋ ನಾಗವಾರ ಜಂಕ್ಷನ್ ನಲ್ಲಿ ಅನಾಹುತ ಸಂಭವಿಸಿದ್ದು. ಮೆಟ್ರೋ‌ ಕಾಮಗಾರಿ ಕಾರಣ ಮುಖ್ಯ ರಸ್ತೆ ಬಂದ್ ಆಗಿರುವುದರಿಂದ ಎಲ್ಲಾ ವಾಹನಗಳು ಸರ್ವೀಸ್​ ರಸ್ತೆಯಲ್ಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಇದರಿಂದಾಗಿ ರಸ್ತೆಯೆಲ್ಲಾ ಗುಂಡಿಮಯವಾಗಿದೆ. ಇದರ ಜೊತೆಗೆ ಒಳಚರಂಡಿ ನೀರು ಕೂಡ ರಸ್ತೆ ಮೇಲೆ ಹರಿಯುತ್ತಿದ್ದು ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯದಂತಾಗಿದೆ.

RELATED ARTICLES

Related Articles

TRENDING ARTICLES