Sunday, December 22, 2024

ಸಿದ್ದು ಸರ್ಕಾರ ರಾಜ್ಯವನ್ನು ಪಾಕಿಸ್ತಾನ ಮಾಡ್ತಾ ಇದೆ : ಸರ್ಕಾರದ ಮೇಲೆ ರೇಣುಕಾಚಾರ್ಯ ವಾಗ್ದಾಳಿ

ದಾವಣಗೆರೆ : ಮಾಜಿ ಸಚಿವ ರೇಣುಕಾಸ್ವಾಮಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು. ಸಿದ್ದು ಸರ್ಕಾರ ರಾಜ್ಯವನ್ನು ಪಾಕಿಸ್ತಾನ ಮಾಡ್ತಾ ಇದೆ. ಜಮೀರ್ ಅಹ್ಮದ್ ನಡುವಳಿಕೆಯನ್ನು ಪಕ್ಷಾತೀತವಾಗಿ ಹಿಂದುಗಳು ಖಂಡಿಸಬೇಕಿದೆ. ನಾವು ಮೌನವಾಗಿದ್ದರೆ ಅದು ನಮ್ಮ ದೌರ್ಬಲ್ಯದಂತಾಗುತ್ತದೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ, ಜಮೀರ್ ತಾಳಕ್ಕೆ ಕುಣಿತಾ ಇದಾರೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಸಿದ್ದು ನೋಟೀಸ್ ಹಿಂಪಡೆಯಲು ಹೇಳಿದ್ದಾರೆ, ವಿನಾ ಪಹಣಿ ಸರಿಪಡಿಸಲು ಹೇಳಿಲ್ಲ. ಇದು ಸಿಎಂ ಸಿದ್ದರಾಮಯ್ಯ ಕಣ್ಣೊರೆಸುವ ತಂತ್ರವಾಗಿದೆ. ಸಿದ್ದರಾಮಯ್ಯ ನೀವು ಹಿಂದೂ ಪರವಾ, ಅಥವಾ ಜಮೀರ್ ಸಂತತಿ ಪರವಾಗಿದ್ದೀರಾ? ಎಂದು ಪ್ರಶ್ನಿಸಿದರು.

ಜಮೀರ್​ರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇನೆ

ಕುಮಾರಸ್ವಾಮಿಗೆ ಅವಹೇಳನಕಾರಿ ಪದ ಬಳಕೆ ಮಾಡಿದ ಜಮೀರ್​ ವಿರುದ್ದ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ. ಜಮೀರ್​ ಕಾಲಿಯಾ ಪದ ಬಳಕೆ ಮಾಡ್ತಿಯಾ ನಾಚಿಕೆ ಆಗಲ್ವಾ ನಿನಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಡಿಕೆ ಕುಟುಂಬ ಖರೀದಿ ಹೇಳಿಕೆ, ಇದು ಅವರ ಕುಟುಂಬಕ್ಕೆ ಮಾಡಿದ ಅವಹೇಳನ ಅಲ್ಲ
ಇದು ಹಿಂದೂಗಳಿಗೆ ಮಾಡಿದ ಅಪಮಾನ. ನಿನಗೆ ದುಡ್ಡು ಅರಬ್ ಕಂಟ್ರಿಯಿಂದ ಬರುತ್ತಾ…?ನಿನ್ನನ್ನು ಎಲ್ಲಿಗೋ ಬರೋಕೆ ಬಿಡೋದಿಲ್ಲ, ಹೋರಾಟ ಮಾಡ್ತೆವಿ. ನಿನ್ನನ್ನು ಒದ್ದು ಪಾಕಿಸ್ತಾನಕ್ಕೆ ಕಳಸ್ತೆವಿ
ದೇವೇಗೌಡ ಮತ್ತು ಕುಮಾರಸ್ವಾಮಿ ನಿನ್ನನ್ನು ಶಾಸಕ ಮಾಡಿದ್ದು ಆಗ ನೀನು ಗುಜರಿ ಕೆಲಸ ಮಾಡ್ತಾ ಇದ್ದೆ
ನಿನ್ನ ಟ್ರಾವೆಲ್ಸ್​ನಲ್ಲಿ ಏನೇನು ಮಾಡಿದೆ ಅಂತಾ ಗೊತ್ತಾ ಎಂದು ಹೇಳಿದರು.

ಕಾಮಗಾರಿಯಲ್ಲಿ ಮುಸ್ಲೀಂ ಮೀಸಲಾತಿ ಕುರಿತು ಹೇಳಿಕೆ 

ಎಲ್ಲಾ ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲೀಂರಿಗೆ  4% ಪ್ರತಿಶತ ಮೀಸಲಾತಿ ನೀಡಬೇಕು ಎಂದು ವಿಚಾರವಾಗಿ ಮಾತನಾಡಿದ ರೇಣುಕಾಚಾರ್ಯ ಇನ್ನು24 ಗಂಟೆ ಒಳಗೆ ಸಿದ್ದುಇದರ ಆದೇಶ ಮಾಡ್ತಾರೆ,ಬಿಜೆಪಿ ಹೋರಾಟ ನಂತರ ಸಿದ್ದು ಆದೇಶ ಮಾಡಿಲ್ಲ ಅಂತಾರೆ, 420 ಜಮೀರ್ ಮಾತು ಕೇಳಿ ಭಯೋತ್ಪಾದಕರಿಗೆ ರಾಜ್ಯ ಮಾರಲು ಹೋಗ್ತಾ ಇದ್ದಿರಿ. ಸ್ವಾಭಿಮಾನಿ ಹಿಂದುಗಳು, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡ್ತಾರೆ.ಸಿಎಂ ಜನ ಕೊಟ್ಟ ಅಧಿಕಾರ ದುರ್ಬಳಕೆ ಮಾಡಿಕೊಳ್ತಾ ಇದಿರಾ.ಉಪಚುನಾವಣೆ ಹಿನ್ನಲೆಯಲ್ಲಿ ಗೃಹಲಕ್ಷ್ಮೀ ಹಣ ಹಾಕಿದ್ದಾರೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತೆ, ಆಗ ಇವರ ಆದೇಶವನ್ನೆಲ್ಲಾ ಹಿಂಪಡೆಯುತ್ತೆವೆ. ರಾಜ್ಯದ ಜನ ಸಿದ್ದು & ಡಿಕೆ ಬಗ್ಗೆ ತುಂಬಾ ಅಭಿಮಾನ ಇಟ್ಟಿದ್ದರು. ಆದರೆ ನೀವು ಈಗ ಉಲ್ಟಾ ಹೋಡಿತಾ ಇದಿರಾ, ಬಹಿರಂಗ ಚರ್ಚೆಗೆ ಬನ್ನಿ ಎಂದು ಮಾದ್ಯಮ ಮೂಲಕ ಸವಾಲ್. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಆಕ್ರೋಶ

RELATED ARTICLES

Related Articles

TRENDING ARTICLES