Friday, December 27, 2024

ಪಾರ್ಕಿಂಗ್​​ ವಿಚಾರಕ್ಕೆ ಜಗಳ : ಸೊಸೆಗಾಗಿ ಜಗಳ ಮಾಡಿದ ಮಾವ ಆಸ್ಪತ್ರೆಗೆ ದಾಖಲು

ಬೆಂಗಳೂರು : ಸೊಸೆ ತಂದ ಜಗಳದಲ್ಲಿ ಭಾಗಿಯಾದ ಮಾವ ಚಾಕು ಚುಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾರ್ಕಿಂಗ್​ ವಿಚಾರಕ್ಕೆ ಜಗಳವಾಡುವಾಗ ಮಧ್ಯೆ ಬಂದ ಮಾವನಿಗೆ ಆರೋಪಿ ಚಾಕು ಚುಚ್ಚಿ ಪರಾರಿಯಾಗಿದ್ದಾನೆ.

ಮನೆ ಮುಂದೆ ಗಾಡಿ ನಿಲ್ಲಿಸಲು ಇಬ್ಬರ ಮಧ್ಯೆ ಜಗಳವಾಗದ್ದು. ಇದೆ ವೇಳೆ ಮನೆಯಲ್ಲಿದ್ದ ಮಾವ ದಳಪತಿ ತನ್ನ ಸೊಸೆಯ ರಕ್ಷಣೆಗೆ ಧಾವಿಸಿದ್ದಾನೆ. ಈ ವೇಳೆ ತನ್ನ ಸೊಸೆಯನ್ನು ವಹಿಸಿಕೊಂಡು ಆರೋಪಿಯ ಜೊತೆ ಮಾವ ಜಗಳ ಮಾಡುವ ವೇಳೆಯಲ್ಲಿ ಮನೆಯೊಳಗೆ ಹೋದ ಸೊಸೆ ಅಡುಗೆ ಮನೆಯಿಂದ ತನ್ನ ಮಾವನಿಗೆ ಚಾಕು ಎಸೆದಿದ್ದಾಳೆ.

ಮಹಿಳೆಯ ಮಾವ ಚಾಕು ತೆಗೆದುಕೊಳ್ಳುವಷ್ಟರಲ್ಲಿ , ಆರೋಪಿ ಚಾಕು ತೆಗೆದುಕೊಂಡು ಮಾವ ದಳಪತಿಯ ಬೆನ್ನಿಗೆ ಇರಿದಿದ್ದು, ಆರೋಪಿ ತಕ್ಷಣವೆ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರೋ ಗಾಯಾಳು ದಳಪತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಮಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES