Friday, December 27, 2024

ಮಗನ ಸೇವೆ ಮಾಡದ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಖಾಸಗಿ ಶಾಲಾ ಪ್ರಿನ್ಸಿಪಲ್

ದೇವನಹಳ್ಳಿ : ಶಾಲೆಯ ಪ್ರಿನ್ಸಿಪಾಲ್ ಮಗನ ಸೇವೆ ಮಾಡಲಿಲ್ಲವೆಂದು 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಬೆತ್ತದಿಂದ ಹಲ್ಲೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ, ವಿಜಯಪುರ ಪಟ್ಟಣದ ಮಂಡಿಬೆಲೆ ರಸ್ತೆಯಲ್ಲಿರುವ ವಿಸ್ಡಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.

ಭವ್ಯ ಹಲ್ಲೆಗೊಳಗಾದ ಮಗು. ಪಟ್ಟಣದ ಪ್ರಭಾವತಿ ಹಾಗೂ ಆಂಜಿನಪ್ಪ ದಂಪತಿಯ ಪುತ್ರಿಯಾಗಿರುವ ವಿದ್ಯಾರ್ಥಿನಿ.ಉಷಾ ಕಿರಣ್ ಮಗುವಿನ ಮೇಲೆ ಹಲ್ಲೆ ಮಾಡಿರುವ ಪ್ರಿನ್ಸಿಪಾಲ್.

ಶಾಲೆಯ ಪ್ರಿನ್ಸಿಪಲ್ ಉಷಾಕಿರಣ್ ಗೆ ವಿಕಲಚೇತನ ಮಗನಿದ್ದಾನೆ. ಅದೇ ಶಾಲೆಯಲ್ಲಿ ಮಗನನ್ನು ನೋಡಿಕೊಳ್ಳಲು ಕೇರ್ ಟೇಕರ್ ಆಗಿ ಮಹಿಳೆಯನ್ನ ನೇಮಿಸಿಕೊಂಡಿದ್ದ ಪ್ರಿನ್ಸಿಪಾಲ್. ಆದರೆ ಆ ಮಹಿಳೆಗೆ ವಿದ್ಯಾರ್ಥಿನಿ ಭವ್ಯ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಮಗುವಿನ ಮೇಲೆ ಬೆತ್ತದಿಂದ ಹಿಗ್ಗಾಮುಗ್ಗಾ ಥಳಿಸಿರುವ ಪ್ರಿನ್ಸಿಪಾಲ್. ಬೆತ್ತದ ಹೊಡೆತಕ್ಕೆ ನೋವಿನಿಂದ ಕಿರುಚಾಡಿದರೂ ಬಿಡದೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಇಂದು ಮಕ್ಕಳ ದಿನಾಚರಣೆ ಹಿನ್ನೆಲೆ ಸಂಭ್ರಮದಿಂದ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ  ಮಕ್ಕಳ ದಿನಾಚರಣೆಯಂದೇ ಪ್ರಿನ್ಸಿಪಾಲ್‌ ರಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದು. ಹಲ್ಲೆ ಮಾಡಿದ ವಿಚಾರ ಪೋಷಕರಿಗೆ ತಿಳಿದು ಶಾಲೆಗೆ ಬಂದು ಉಷಾ ಕಿರಣ್ ಗೆ ದಿಗ್ಬಂಧನ ಹಾಕಿ ಆಕ್ರೋಶ ಹೊರಹಾಕಿದರು. ಸದ್ಯ ಸ್ಥಳಕ್ಕೆ ವಿಜಯಪುರ ಪೊಲೀಸರು ದೌಡಾಯಿಸಿದ್ದಾರೆ.

RELATED ARTICLES

Related Articles

TRENDING ARTICLES