Saturday, December 28, 2024

ಪ್ರತಿಷ್ಟಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್​ ಬ್ಲಾಕಿಂಗ್: ದೂರು ದಾಖಲಿಸಿದ KEA

ಬೆಂಗಳೂರು : 2024-25 ನೇ ಸಾಲಿನ ಇಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ಖಾಸಗಿ ಕಾಲೇಜುಗಳಿಂದ ಸೀಟು ಬ್ಲಾಕಿಂಗ್ ವಿಚಾರವಾಗಿ ಕೆಇಎಯಿಂದ ದೂರು ದಾಖಲಾಗಿದ್ದು. ಅವಧಿ ಪೂರ್ವವಾಗಿ ಸೀಟ್​ಗಳನ್ನು ಬ್ಲಾಕ್​ ಮಾಡುವವರಿಂದ ಇತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.

ಸೀಟು ಬ್ಲಾಕಿಂಗ್ ಅಕ್ರಮದ ಬಗ್ಗೆ ಕೆಇಎ ಎಫ್​ಐಆರ್ ದಾಖಲಿಸಿದ್ದು. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ  ಕೆಇಎ ನಿರ್ದೇಶಕ ಹೆಚ್ ಪ್ರಸನ್ನ ದೂರು ದಾಖಲು ಮಾಡಿದ್ದಾರೆ. ಹೆಚ್ಚು ಬೇಡಿಕೆ ಇರುವ ಕೋರ್ಸ್​ಗಳ ಸೀಟು ಬ್ಲಾಕಿಂಗ್ ಆಗುತ್ತಿದ್ದು.ಕಂಪೂಟ್ಯರ್ ಸೈನ್ಸ್,ಕೃತಕ ಬುದ್ದಿಮತ್ತೆ(AI) ಮತ್ತು ಸೈಬರ್ ಸೆಕ್ಯೂರಿಟಿ ಕೋರ್ಸ್ ಸೀಟುಗಳ ಬ್ಲಾಕ್​​ ಆಗುತ್ತಿದೆ ಎಂದು ಮಾಹಿತಿ ದೊರೆತಿದೆ.

ಸೀಟು ಸಿಕ್ಕಿದ್ರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದಾಖಲಾಗದ ಹಿನ್ನಲೆ.ಕೆಇಎಯಿಂದ ಹಂಚಿಕೆಯಾದ 2348 ವಿದ್ಯಾರ್ಥಿಗಳು ದಾಖಲಾಗಿಲ್ಲ ಎಂದು ಮಾಹಿತಿ ದೊರೆತಿದ್ದು. ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಸೂಚನೆ ಮೇರೆಗೆ ದೂರು ದಾಖಲಿಸಲಾಗಿದ್ದು. ಸೀಟು ಬ್ಲಾಕಿಂಗ್​ನಲ್ಲಿ ಪ್ರತಿಷ್ಠಿತ ಕಾಲೇಜುಗಳು ಭಾಗಿಯಾಗಿರೋದು ಕಂಡು ಬಂದಿದೆ. ತನಿಖೆಯಿಂದ ಯಾವ ಕಾಲೇಜು ಅಂತ ಸಧ್ಯದಲ್ಲೇ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES