Thursday, January 23, 2025

ಜೀವನದಲ್ಲಿ ಪ್ರಧಾನಿ ಮೋದಿ ಸಂವಿಧಾನವನ್ನು ಎಂದಿಗೂ ಓದಿಲ್ಲ: ರಾಹುಲ್ ಗಾಂಧಿ

ಮಹರಾಷ್ಟ್ರ : ಇತ್ತೀಚೆಗೆ ಕಾಂಗ್ರೆಸ್​​ ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಖಾಲಿ ಸಂವಿಧಾನ ಪುಸ್ತಕಗಳನ್ನು ಹಂಚಿದೆ ಎಂದು ಆರೋಪಿಸಿದ್ದ ಬಿಜೆಪಿಗೆ, ಇಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ಟಾಂಗ್​ ನೀಡಿದ್ದು. ಪ್ರಧಾನಿ ಎಂದು ಸಂವಿಧಾನವನ್ನು ಓದಿಯೇ ಇಲ್ಲ ಅದಕ್ಕೆ ಅವರಿಗೆ ಸಂವಿಧಾನ ಪುಸ್ತಕ ಖಾಲಿಯಾದಂತೆ ಕಾಣುತ್ತದೆ ಎಂದು ಹೇಳಿದರು.

ಜೀವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು ಎಂದಿಗೂ ಓದಿಲ್ಲ. ಹಾಗಾಗಿ ಕೆಂಪು ಬಣ್ಣದ ಪುಸ್ತಕ ಖಾಲಿಯಾಗಿದೆ ಎಂದು ಭಾವಿಸಿದ್ದಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಅವರೇ ಇದು ಕೇವಲ ಒಂದು ಪುಸ್ತಕವಲ್ಲ. ಈ ಪುಸ್ತಕ ಖಾಲಿಯಾಗಿಲ್ಲ. ಭಾರತದ ಆತ್ಮ ಹಾಗೂ ಜ್ಞಾನವನ್ನು ಹೊಂದಿದೆ. ಬಿರ್ಸಾ ಮುಂಡಾ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಮತ್ತು ಬುದ್ಧ ಸೇರಿದಂತೆ ಮಹಾನ್ ನಾಯಕರ ತತ್ವಾದರ್ಶಗಳನ್ನು ಒಳಗೊಂಡಿದೆ’ ಎಂದು ಪ್ರತಿಪಾದಿಸಿದ್ದಾರೆ. ‘ಒಂದು ವೇಳೆ ಈ ಪುಸ್ತಕವನ್ನು ಖಾಲಿಯಾಗಿದೆ ಎಂದು ಕರೆದರೆ ಅದು ಈ ದೇಶದ ನಾಯಕರನ್ನು ಅವಮಾನಿಸಿದಂತೆ’ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES