ಬೆಂಗಳೂರು : ನಗರದಲ್ಲಿ ಇಂದು ಸುದ್ದಿಗೋಷ್ಟಿ ಮಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಸಿಎಂ ಸಿದ್ದರಾಮಯ್ಯರ ಮೇಲೆ ವಾಗ್ದಾಳಿ ನಡೆಸಿದ್ದು. ಸರ್ಕಾರದ ಮೇಲೆ ಹರಿಹಾಯ್ದರು.
ಸಿದ್ದರಾಮಯ್ಯ ತಮ್ಮ ಶಾಸಕರ ಮೇಲೆ ವಿಶ್ವಾಸ ಕಳೆದುಕೊಳ್ತಾ ಇದ್ದಾರೆ. ಹೀಗಾಗಿ ಅವರ ಮೇಲೆ 50 ಕೋಟಿ ಫಿಕ್ಸ್ ಮಾಡಿದ್ದಾರೆ. ಮುಡಾ ಹಗರಣ ಬಂದಾಗಿಂದ ಸಿದ್ದರಾಮಯ್ಯ ಹೀಗೆ ಹೇಳಿಕೆ ಕೊಡ್ತಾ ಇದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಕೋಟಿಗೊಬ್ಬ ಅಂದುಕೊಂಡಿದ್ದಾರೆ. ಆದರೆ ಇವರು ಲೂಟಿಗೊಬ್ಬ. ಶಾಸಕರ ಖರೀದಿಸಲು 50 ಕೋಟಿ ಫಿಕ್ಸ್ ಮಾಡಿದ್ದಾರೆ ಸಿದ್ದರಾಮಯ್ಯ. 50 ಕೋಟಿ ಡೀಲ್ ಎಲ್ಲಾಯ್ತು? ರಸ್ತೆಲಿ ಆಯ್ತಾ , ದೇವಸ್ಥಾನದಲ್ಲಿ ಡೀಲ್ ಆಯ್ತಾ ಹೇಳಿ. ಕಾಂಗ್ರೆಸ್ ಶಾಸಕರಿಗೆ ಇದು ನಾಚಿಕೆಗೇಡಿನ ಸಂಗತಿ. ಸಿದ್ದರಾಮಯ್ಯರನ್ನು ಲೆಕ್ಕ ರಾಮಯ್ಯ ಎನ್ನುತ್ತೇವೆ. ಸರ್ಕಾರ ರಚನೆ ಆಗಬೇಕು ಎಂದರೆ 2/3 ಶಾಸಕರು ಹೊರ ಬರಬೇಕು, ಅದೆಲ್ಲಾ ಸಾಧ್ಯವಾ. ಅಷ್ಟಾದ್ರೂ ಬೇಡವಾ ಸಿಎಂಗೆ. ಸಿದ್ದರಾಮಯ್ಯ ಘನೆತೆಗೆ ಇದು ತಕ್ಕ ಮಾತಲ್ಲ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಶಾಸಕ ಆರ್. ಅಶೋಕ್ 50 ಶಾಸಕರ ಖರೀದಿಗೆ 50 ಕೋಟಿ ಎಂದರೆ 2500 ಕೋಟಿ ಅಯ್ತು. ಆ ಹಣ ಎಲ್ಲಿದೆ?ಯಾರ ಮನೆಲಿ ಇದೆ.? ಎಂದು ಪ್ರಶ್ನಿಸಿದರು. ಬೇನಾಮಿ ಹಣ ಇದ್ರೆ ಇಡಿ ಕೇಸ್ ಹಾಕಬೇಕು. ಸಿದ್ದರಾಮಯ್ಯ ಎತ್ತರದ ಜಾಗದಲ್ಲಿ ಇದ್ದಾರೆ. ಸಂವಿಧಾನದ ಹುದ್ದೆಯಲ್ಲಿ ಇದ್ದಾರೆ.ಸಿದ್ದರಾಮಯ್ಯ ಹೇಳಿಕೆ ಪ್ರಕಾರ 2500 ಕೋಟಿ ಮೇಲೆ ಇಡಿ ಕೇಸ್ ಹಾಕಬೇಕು. ಸಿದ್ದರಾಮಯ್ಯರನ್ನು ವಿಚಾರಣೆ ಮಾಡಬೇಕು.
ಸಿದ್ದರಾಮಯ್ಯ ಮುಟ್ಟಿದ್ರೆ ದಂಗೆ ಆಗುತ್ತೆ ಎನ್ನುತ್ತೀರಿ. ನೀವೆನು ಬ್ರಹ್ಮಾನಾ, ಪರಮೇಶ್ವರನಾ, ಕೃಷ್ಣನಾ ಮೇಲಿಂದ ಇಳಿದು ಬಂದವರಾ. ಮುಡಾ ಪ್ರಕರಣದಲ್ಲಿ ಯಾರಾದರೂ ಶೇರ್ ತಗೊಂಡಿದ್ರೆ ದಂಗೆ ಏಳ್ತಾ ಇದ್ದರು.
ಶೇರ್ ಏನು ಇಲ್ಲ ಅವರು ದಂಗೆ ಹೇಗೆ ಏಳ್ತಾರೆ ಎಂದು ಸಿದ್ದರಾಮಯ್ಯ ಮೇಲೆ ಅಶೋಕ್ ವಾಗ್ದಾಳಿ ನಡೆಸಿದರು.