Friday, November 15, 2024

ಗ್ಯಾಸ್‌ ಚೇಂಬ‌ರ್​ಗೆ ಪ್ರವೇಶಿಸಿದಂತಾಯಿತು: ದೆಹಲಿ ಮಾಲಿನ್ಯದ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿಕೆ

ದೆಹಲಿ : ದೆಹಲಿ ವಾಯು ಮಾಲಿನ್ಯದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ. ವಯನಾಡ್‌ನಿಂದ ದೆಹಲಿಗೆ ಬಂದಿಳಿದಾಗ ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದ ಅನುಭವವಾಯಿತು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಪ್ರಿಯಾಂಕಾ ಗಾಂಧಿ, ಅಲ್ಲಿ ಮತದಾನ ಮುಗಿಸಿ ದೆಹಲಿಗೆ ಆಗಮಿಸಿದ್ದಾರೆ. ಆ ಬಳಿಕ ಅವರಿಂದ ಈ ಪ್ರತಿಕ್ರಿಯೆ ಬಂದಿದೆ. “ವಾಯು ಮಾಲಿನ್ಯ ಪ್ರಮಾಣ 35 AQI ಇರುವ ವಯನಾಡ್‌ನಿಂದ ದೆಹಲಿಯಲ್ಲಿ ಬಂದಿಳಿದಾಗ ಗ್ಯಾಸ್‌ ಚೇಂಬರ್‌ಗೆ ಬಂದಿಳಿದಂತಾಯಿತು. ದಟ್ಟವಾಗಿ ಆವರಿಸಿಕೊಂಡಿರುವ ಹೊಗೆ, ಆಗಸದಿಂದ ನೋಡಿದಾಗ ಮತ್ತಷ್ಟು ಆಘಾತವಾಯಿತು’ ಎಂದು ಬರೆದುಕೊಂಡಿದ್ದಾರೆ.

‘ದೆಹಲಿಯಲ್ಲಿ ವಾಯು ಮಾಲಿನ್ಯ ವರ್ಷ ಕಳೆದಂತೆ ಹೆಚ್ಚಾಗುತ್ತಿದೆ. ಶುದ್ಧ ಗಾಳಿ ಪಡೆಯಲು ನಾವೆಲ್ಲಾ ಪಕ್ಷಾತೀತವಾಗಿ ಒಂದಾಗಬೇಕಿದೆ. ಮಕ್ಕಳಿಗೆ, ಶ್ವಾಸಕೋಶದ ಸಮಸ್ಯೆ ಇರುವವರಿಗೆ ಉಸಿರಾಡುವುದು ಕಷ್ಟವಾಗಿದೆ. ಇದಕ್ಕೆ ನಾವು ಏನಾದರೂ ಮಾಡಲೇಬೇಕಿದೆ’ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES