Thursday, November 14, 2024

ನಗರವಾಸಿಗಳಿಗೆ ನೀರಿನ ಶಾಕ್​ : ನೀರಿನ ಬಿಲ್​​ನೊಂದಿಗೆ ಹಸಿರುಸೆಸ್​ ಸಂಗ್ರಹಕ್ಕೆ ಮುಂದಾದ ಸರ್ಕಾರ

ಬೆಂಗಳೂರು :  ನೀರಿನ ಬಿಲ್​ನಲ್ಲಿ ಹಸಿರು‌ ಸೆಸ್ ಸಂಗ್ರಹಕ್ಕೆ ಅರಣ್ಯ ಇಲಾಖೆ ಚಿಂತನೆ ಮಾಡಿದ್ದು. ಇದರ ಕುರಿತಂತೆ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿದೆ. ಸೆಸ್​​ ಹಣದಲ್ಲಿ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲಾಗುವುದು ಎಂದು ಅರಣ್ಯ ಇಲಾಖೆ ಹೇಳಿದೆ.

ಪಶ್ಚಿಮಘಟ್ಟದ ನದಿಗಳ ನೀರು ಪೂರೈಕೆಯಾಗುವ ನಗರಗಳಿಗೆ ಹಸಿರು ಸೆಸ್ ವಿಧಿಸಲಾಗುತ್ತದೆ ಎಂದು ಮಾಹಿತಿ ದೊರೆತಿದ್ದು. ಪಶ್ಚಿಮಘಟ್ಟಗಳಿಂದ ಹರಿಯುವ ತುಂಗಾ, ಭದ್ರಾ, ಕಾವೇರಿ, ಕಬಿನಿ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಿಂದ ನೀರು ಪಡೆಯುವ ನಗರಗಳಿಗೆ ಸೆಸ್ ವಿಧಿಸಲು ಪ್ರಸ್ತಾವನೆ ಸಲ್ಲಿಕೆಗೆ ಅರಣ್ಯ ಸಚಿವ ಈಶ್ವರ್​ ಖಂಡ್ರೆ ಅಪರ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಪಶ್ಚಿಮ ಘಟ್ಟದ ನದಿಗಳಿಂದ ರಾಜ್ಯದ ಹಲವು ನಗರ, ಪಟ್ಟಣ ಪ್ರದೇಶಗಳಿಗೆ ನೀರಿನ ಪೂರೈಕೆಯಾಗುತ್ತಿದ್ದು. ಬಳೆಕೆ ಮಾಡುವ ಪ್ರತಿ ಮನೆಯ ನೀರಿನ ಬಿಲ್​​ನಲ್ಲಿ 2 ರಿಂದ 3 ರೂಪಾಯಿ ಸೆಸ್​ ಸೇರಿಸಲು ಚಿಂತಿಸಿದ್ದು. ಈ ಹಣದಿಂದ ಕಾಪು ನಿಧಿಯನ್ನು ಸ್ಥಾಪಿಸಿ ಪಶ್ಚಿಮಘಟ್ಟವನ್ನು ಸಂರಕ್ಷಿಸಲಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ಸಲ್ಲಿಕೆ ಮಾಡಲಾಗಿದೆ.

ಈ ಮೂಲಕ ಪರಿಸರ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು. ಸಂಗ್ರಹವಾಗುವ ಹಣವನ್ನು ಕೇವಲ ಪಶ್ಚಮಘಟ್ಟಗಳ ಅಭಿವೃದ್ದಿಗೆ ಬಳಸಲು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES