Thursday, November 14, 2024

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ: ಬಾಂಬ್​ ತಯಾರಿಕೆ ಕುರಿತು ಶಾಕಿಂಗ್​ ಹೇಳಿಕೆ ನೀಡಿದ ಆರೋಪಿಗಳು

ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಎನ್‌ಐಎ ತನಿಖೆಯಲ್ಲಿ ಮತ್ತೊಂದು ಸ್ಪೋಟಕ‌ ವಿಚಾರ ಬಯಲಾಗಿದ್ದು. ಆರೋಪಿಗಳು ತಾವು ಒಂದು ಬಾಂಬ್​ ತಯಾರಿಸುವ ವಿಧಾನ ಮತ್ತು ಒಂದು ಬಾಂಬ್​ ತಯಾರಿಸಲು ತಾವು ತೆಗೆದುಕೊಳ್ಳುತ್ತದ್ದ ಶಾಕಿಂಗ್​ ವಿಚಾರವನ್ನು ಎನ್​ಐಎ ಬಳಿ ಬಾಯ್ಬಿಟ್ಟಿದ್ದಾರೆ.

ಒಟ್ಟು ಆರು ಶಂಕಿತ ಉಗ್ರರು ಐಸಿಸ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು ಎಂದು ಮಾಹಿತಿ ಹೊರಬಿದ್ದಿದ್ದು.
ಅಬ್ದುಲ್ ಮತೀನ್ ತಾಹ, ಮುಸಾವೀರ್ ಹುಸೇನ್, ಶಾರಿಕ್, ಅರಾಫತ್ ಅಲಿ, ಮಾಜ್ ಮುನೀರ್ ಹಾಗೂ ಮುಜಾಮಿಲ್ ಷರೀಫ್​ರ ಪೈಕಿ ಅಬ್ದುಲ್​ ಮತೀನ್​ ತಾಹಾ, ಮಾಜ್​ ಮುನೀರ್​ ಸೇರಿದಂತೆ ನಾಲ್ಕು ಜನರಿಗೆ ಬಾಂಬ್​ ತಯಾರಿಸಲು ಐಸಿಸ್​ ಟ್ರೈನಿಂಗ್​ ನೀಡಲಾಗಿತ್ತು ಎಂದು ಮಾಹಿತಿ ದೊರೆತಿದೆ.

ಈ‌ ನಾಲ್ವರು ಒಂದು IED ಬಾಂಬ್ ತಯಾರಿಕೆ ತಗೋತಾ ಇದ್ದಿದ್ದು ಒಂದು ವಾರ ಕಾಲಾವಕಾಶ ಮಾತ್ರ ಎಂದು ಎನ್​ಐಎ ತನಿಖೆಯಲ್ಲಿ ಮಾಹಿತಿ ದೊರೆತಿದ್ದು. ಆನ್ ಲೈನ್ ಮೂಲಕ ಬೇಕಾದ ಕಚ್ಚಾವಸ್ತುಗಳನ್ನು ಖರೀದಿಸಿ ಒಂದು ವಾರದಲ್ಲಿ ಬಾಂಬ್ ತಯಾರಿಕೆ ಮಾಡುತ್ತಿದ್ದರು. ಮಂಗಳೂರು ಕುಕ್ಕರ್ ಬಾಂಬ್, ಬಿಜೆಪಿ ಕಚೇರಿ ಬಳಿ ಇಟ್ಟಿದ್ದ ಬಾಂಬ್, ರಾಮೇಶ್ವರಂ ಕೆಫೆ ಬಳಿ ಇಟ್ಟಿದ್ದ ಬಾಂಬ್. ಈ ಎಲ್ಲಾ ಬಾಂಬ್ ಗಳು ತಯಾರಿಕೆಗೆ ತಗೊಂಡಿದ್ದು ಕೇವಲ ಒಂದು ವಾರ ಮಾತ್ರ ಎಂಬ ಶಾಕಿಂಗ್​ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಬಾಂಬ್ ಎಲ್ಲಿ ಇಡಬೇಕು ಅನ್ನೋ ಫ್ಲಾನ್ ಫೈನಲ್ ಆಗಿದ್ದೇ ಬಾಂಬ್ ತಯಾರಿಕೆಗೆ ಮುಂದಾಗ್ತಾ ಇದ್ದರು ಎಂದು ಮಾಹಿತಿ ದೊರೆತಿದೆ.

ಹೀಗೆ ನಾಲ್ವರು ತಯಾರಿಸಿದ ಬಾಂಬ್​ಗಳಿಗೆ 90 ನಿಮಿಷಗಳ ಟೈಮರ್​ ಇಟ್ಟು ಅದನ್ನು ತಾವು ಪೂರ್ವಯೋಜಿತ ಸ್ಥಳದಲ್ಲಿಟ್ಟು ಬಂದಿದ್ದರು ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES