Saturday, December 28, 2024

ಮಾಜಿ ಸಚಿವರಿಂದ ನೂತನ ಎ.ಡಿ.ಬಿ ಫೌಂಡೇಶನ್ ಸಂಸ್ಥೆಯ ಲಾಂಛನ ಅನಾವರಣ

ರಾಯಚೂರು: ಸ್ವಾತಂತ್ರ್ಯ, ಸಮಾನತೆ, ಸೌಹಾರ್ದತೆ ತತ್ವ ಸಿದ್ಧಾಂತ ಹೊಂದಿರುವ ಎ.ಡಿ.ಬಿ( ಏಷಿಯನ್ ಡೆವಲಪ್ಮೆಂಟ್ ಬೋರ್ಡ್ ) ಫೌಂಡೇಶನ್ ಎಂಬ ನೂತನ ಸೇವಾ ಸಂಸ್ಥೆಯ ಲಾಂಛನವನ್ನು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರು ಅನಾವರಣಗೊಳಿಸಿದರು.

ನಗರದ ಅವರ ಗೃಹ ಕಚೇರಿಯಲ್ಲಿ ಸಂಸ್ಥೆಯ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಒಳ್ಳೆಯ ಉದ್ದೇಶ, ಸ್ಪಷ್ಟ ಗುರಿ, ಮತ್ತು ತತ್ವ ಸಿದ್ಧಾಂತ ಇರುವ ಇಂತಹ ಸಂಸ್ಥೆಗಳು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು. ಇಂತಹ ಸಂಸ್ಥೆಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಆ ಒಂದು ನಿಟ್ಟಿನಲ್ಲಿ ಈ ಒಂದು ಎ.ಡಿ.ಬಿ ಫೌಂಡೇಶನ್ ಸಂಸ್ಥೆ ಸಾಗುತ್ತದೆ ಎನ್ನುವ ವಿಶ್ವಾಸವಿದೆ. ಇನ್ನೂ ಉನ್ನತ ಮಟ್ಟದಲ್ಲಿ ಈ ಸಂಸ್ಥೆ ಕಡೆಯಿಂದ ಕಟ್ಟ ಕಡೆಯ ವ್ಯಕ್ತಿಗೆ ಸೇವೆ ಸಿಗುವಂತಾಗಲಿ. ಎ.ಡಿ.ಬಿ ಸಂಸ್ಥೆಯವರು ಒಳ್ಳೆಯ ಉದ್ದೇಶದಿಂದ ಈ ಒಂದು ಎ.ಡಿ.ಬಿ ( ಏಷಿಯನ್ ಡೆವಲಪ್ಮೆಂಟ್ ಬೋರ್ಡ್ ) ಫೌಂಡೇಶನ್ ಸಂಸ್ಥೆ ಹುಟ್ಟು ಹಾಕಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಮುಂದಿನ ದಿನಗಳಲ್ಲಿ ಅವರು ಕಂಡ ಕನಸುಗಳು ಈಡೇರಲಿ ಅವರಿಗೆ ಮತ್ತಷ್ಟು ಯಶಸ್ವಿ ಸಿಗಲಿ ಎಂದು ಕೆ. ಶಿವನಗೌಡ ನಾಯಕ ಅವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ಆಂಜನೇಯ ನಾಯಕ, ವ್ಯವಸ್ಥಾಪಕ, ನಿರ್ದೇಶಕರಾದ ಡಿ. ನಾಯಕ ದೇವತಗಲ್ ಹಾಗೂ ಕಿಯೋನಿಕ್ಸ್ ಅಧ್ಯಕ್ಷರಾದ ವಿಠಲ ದೇವದುರ್ಗ ಸೇರಿದಂತೆ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES