Wednesday, January 22, 2025

ರಾಡ್​ನಿಂದ ಹೊಡೆದು ಜೋಡಿಕೊ*ಲೆ ಪ್ರಕರಣ : ಆರೋಪಿ ಬಂಧನ

ದೇವನಹಳ್ಳಿ: ಸಿಲಿಕಾನ್‌ ಸಿಟಿಯ ಹೊರವಲಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಬಸ್ ಸರ್ವಿಸ್ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಬಂಧಿತ ಆರೋಪಿ. ನಾಗೇಶ್ (55) ಮತ್ತು ಮಂಜುನಾಥ್ (50) ಎಂಬವರನ್ನ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದನು.

ಕುಡಿದ ನಶೆಯಲ್ಲಿ ಗಲಾಟೆ ಮಾಡಿಕೊಂಡು ರಾಡ್‌ನಿಂದ ತಲೆಗೆ ಹೊಡೆದು ಇಬ್ಬರ ಹತ್ಯೆ ಮಾಡಿದ್ದ. ನಾಗೇಶ್ ಮತ್ತು ಮಂಜುನಾಥ್‌ನಿಂದ ಸದಾ ಸುರೇಶ್‌ಗೆ ಬೈಯ್ಯುತ್ತಿದ್ದರು. ಕುಡಿದ ಬಳಿಕ ನೀನು ಕಳ್ಳ, ನಿನ್ನ ಮೇಲೆ ಕೇಸ್‌ಗಳಿವೆ ಎಂದು ಸದಾ ಹಿಯಾಳಿಸುತ್ತಿದ್ದರು ಇದರಿಂದ ಕುಪಿತಗೊಂಡ ಆರೋಪಿ ಸುರೇಶ್​ ಕೊಲೆ ಮಾಡಿದ್ದನು.

ಕೊಲೆಯಾದ ಶುಕ್ರವಾರ ರಾತ್ರಿ ಕೂಡ ಕುಡಿದು ನಿಂದನೆ ಮಾಡಿದ್ದಾರೆ. ಇದರಿಂದ ಬೇಸತ್ತು ಇಬ್ಬರನ್ನ ರಾಡ್‌ನಿಂದ ಹೊಡದು ಕೊಲೆ ಮಾಡಿ ಆರೋಪಿ ಸುರೇಶ್‌ ಪರಾರಿಯಾಗಿದ್ದ. ಬೆಂಗಳೂರು ಉತ್ತರ ತಾಲೂಕಿನ ಸಿಂಗಹಳ್ಳಿ ಗ್ರಾಮದ ಬಳಿ ಕೊಲೆ ನಡೆದಿತ್ತು

RELATED ARTICLES

Related Articles

TRENDING ARTICLES