Tuesday, December 3, 2024

ಬೀದಿನಾಯಿಗೆ ಊಟ ಹಾಕಿದ ಮಹಿಳೆಯ ಮೇಲೆ ಹಲ್ಲೆ : 5 ಜನರ ಮೇಲೆ FIR ದಾಖಲು

ಬೆಂಗಳೂರು : ಬೀದಿ ನಾಯಿಗೆ ಊಟ ಹಾಕಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಹಲ್ಲೆ ಮಾಡಿದ 5 ವಿರುದ್ಧ ಹೆಚ್.ಎ.ಎಲ್​​​ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬಸವನಗರದ, ಗುರುರಾಜ ಲೇಔಟ್ ನ 6ನೇ ಕ್ರಾಸ್ ನಲ್ಲಿ ಅನ್ನೀ ಜಾರ್ಜ್ ಎಂಬ ಮಹಿಳೆಯು ಪ್ರತಿ ನಿತ್ಯ 4 ಬೀದಿ ನಾಯಿಗಳಿಗೆ ಊಟ ಹಾಕುತಿದ್ದರು. ಕಳೆದ 10 ವರ್ಷಗಳಿಂದ ಇದನ್ನೆ ರೂಡಿಯಾಗಿಸಿಕೊಂಡಿದ್ದ ಮಹಿಳೆ ಎಂದಿನಂತೆ ನವೆಂಬರ್ 5ರ ರಾತ್ರಿ‌ ಊಟ ಹಾಕಲು ಸ್ಥಳಕ್ಕೆ ಹೋಗಿದ್ದಾರೆ. ಆದರೆ ಈ ಸಂಧರ್ಬದಲ್ಲಿ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಿರಿಕ್​​ ತೆಗೆದಿದ್ದಾನೆ ಎಂದು ಮಾಹಿತಿ ದೊರೆತಿದೆ.

ಊಟ ಹಾಕುತ್ತಿದ್ದ ಮಹಿಲೆಯ ಜೊತೆ ಕಿರಕ್​​ ತೆಗೆದ ಅಪರಿಚಿತರು ಮಹಿಳೆಯಿಂದ ಬೈಕ್ ಕೀ ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಂತರ ಮಹಿಳೆಯ ಮೊಬೈಲ್​​ ಕಿತ್ತುಕೊಂಡು ಬಿಸಾಡಿ, ಪ್ಲಾಸ್ಟಿಕ್​ ಸ್ಟಿಕ್​ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟೆ ಅಲ್ಲದೆ ಅಕ್ಕ ಪಕ್ಕದ ಮನೆಯವರು ಬಂದು ಮಹಿಳೆಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆಯು ದೂರು ನೀಡಿದ್ದು. HAL ಪೋಲಿಸರು ಒಟ್ಟು 5 ಜನರ ವಿರುದ್ಧ ಎಫ್​ಐಆರ್​​ ದಾಖಲು ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES