Monday, December 23, 2024

ಅನ್ನಪೂರ್ಣ ತುಕಾರಾಂ ಪರವಾಗಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ

ಬಳ್ಳಾರಿ : ಇಂದು (ಅ.07) ಗಣಿ ಜಿಲ್ಲೆ ಬಳ್ಳಾರಿಗೆ  ಸಿಎಂ ಆಗಮಿಸಲಿದ್ದು. ಸಂಡೂರು ಉಪಚುನಾವಣೆ ಹಿನ್ನಲೆ ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಪರವಾಗಿ ಪ್ರಚಾರ ಮಾಡಲು ಸಂಡೂರಿಗೆ ಆಗಮಿಸಿದ್ದಾರೆ. ಬೆಳಿಗ್ಗೆ 10.20ಕ್ಕೆ ಬಳ್ಳಾರಿಯ ಜಿಂದಾಲ್ ಏರ್ ಸ್ಟ್ರಿಪ್​ಗೆ ಬಂದಿಳಿದ ಸಿಎಂ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿಗಳು ಭಾಗವಹಿಸಲಿರುವ ಪ್ರಚಾರ ಸಭೆಗಳ ವಿವರಗಳು ಈ ಕೆಳಗಿನಂತಿವೆ.

ಸಿಎಂ ಪ್ರಚಾರ ಕಾರ್ಯಕ್ರಮದ ವಿವರಗಳು

  • ಬೆಳಿಗ್ಗೆ 11 ಗಂಟೆ – ಬೊಮ್ಮಘಟ್ಟ ಗ್ರಾಮ
  • ಮದ್ಯಾಹ್ನ 12.30 ಗಂಟೆ – ಚೋರನೂರು ಗ್ರಾಮ
  • ಮದ್ಯಾಹ್ನ 1.30 ಗಂಟೆ – ಬಂಡ್ರಿ ಗ್ರಾಮ
  • ಮದ್ಯಾಹ್ನ 2.30 ಗಂಟೆ – ಯಶವಂತನಗರ

ವಿಶ್ರಾಂತಿ….

  • ಸಂಜೆ 5.00 ಗಂಟೆ – ಕೃಷ್ಣಾ ನಗರ
  • ಸಂಜೆ 6.30 ಗಂಟೆ – ಸುಶೀಲಾ ನಗರ
  • ರಾತ್ರಿ 8.00 ಗಂಟೆ – ತಾರಾನಗರದಲ್ಲಿ ಇಂದು ಪ್ರಚಾರ ಕೈಗೊಳ್ಳಲಿದ್ದಾರೆ.

ಇಂದು ಮತ್ತೆ ನಾಳೆ ಎರಡು ದಿನಗಳ ಕಾಲ ಸಂಡೂರಿನಲ್ಲಿಯೆ ವಾಸ್ಥವ್ಯ ಹೂಡುವ ಸಿಎಂ ಸಿದ್ದರಾಮಯ್ಯ. ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಪರವಾಗಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಮತ್ತೆ ಅ.09ರಂದು ಬೆಂಗಳೂರಿಗೆ ವಾಪಸಾಗಿ ಮತ್ತೆ ಅ.10ರಂದು ಸಂಡೂರಿನಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

RELATED ARTICLES

Related Articles

TRENDING ARTICLES