Friday, November 22, 2024

‘ವಕ್ಫ್ ಬೋರ್ಡ್ ಅಂದ್ರೆ, ಸಾಬ್ರು ಬೋರ್ಡ್’ : ವಕ್ಫ್​ ಕಾನೂನಿನ ವಿರುದ್ದ ಕಿಡಿಕಾರಿದ ಆರ್​​. ಅಶೋಕ್​

ಮಂಡ್ಯ: ಜಿಲ್ಲೆಯ ಮಹದೇವಪುರ ಗ್ರಾಮದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ವಕ್ಫ್​​ ಬೋರ್ಡ್​ ಮತ್ತು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು. ಸ್ಥಳೀಯನ ರೈತರಿಗೆ ನಿಮ್ಮ ಜಮೀನಿನ ಪಹಣಿಯನ್ನು ಪರಿಶೀಲನೆ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಆರ್​. ಅಶೋಕ್​ ಮತ್ತು ಇತರ ಸ್ಥಳೀಯ ಮುಖಂಡರು ಮಂಡ್ಯದ ಮಹದೇವಪುರ ಗ್ರಾಮದ ಚಿಕ್ಕಮ್ಮ ದೇವಿ ದೇವಾಸ್ಥಾನಕ್ಕೆ ಭೇಟಿ ನೀಡಿ. ದೇವಸ್ಥಾನವನ್ನು ಉಳಿಸಲು ನಾವು ಬಂದಿದ್ದೇವೆ. ವಕ್ಫ್​​ ಬಗ್ಗೆ ಜನರಿಗೆ ಹೆಚ್ಚಿಗೆ ತಿಳಿದಿಲ್ಲ. ವಕ್ಫ್ ಬೋರ್ಡ್ ಅಂದ್ರೆ ಸಾಬ್ರು ಬೋರ್ಡ್ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಅಶೋಕ್​​ ಈ ಹಳ್ಳಿಯಲ್ಲಿ ಯಾರು ಮುಸ್ಲಿಮರು ಇಲ್ಲ, ಅವರ ಜಾಗವೂ ಇಲ್ಲ, ಅವರ ಹೆಣವನ್ನು ಹೂಳಿಲ್ಲ.
ಹಾಗಿದ್ದ ಮೇಲೆ ಹೇಗೆ ಈ ಜಾಗ ವಕ್ಫ್ ಆಸ್ತಿ ಆಗುತ್ತದೆ ಹೇಳಿ‌? ಎಂದು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಅಶೋಕ್​, ಮನಮೋಹನ್ ಸಿಂಗ್ ಅಧಿಕಾರದಿಂದ ಇಳಿಯುವಾಗ ವಕ್ಫ್ ಪರ ಕಾಯ್ದೆ ತಂದರು.ಯಾವುದಾದರೂ ಆಸ್ತಿಯನ್ನ ವಕ್ಫ್ ಆಸ್ತಿ ಅಂದ್ರೆ ಪಹಣಿಯಲ್ಲಿ ಬಂದು ಬಿಡುತ್ತದೆ.
ಈ ರೀತಿಯ ಕಾನೂನು ಮಾಡಿಕೊಟ್ಟದ್ದು ದುರುಳ ಕಾಂಗ್ರೆಸಿಗರು ಅದಕ್ಕೆ ಈಗ ವಕ್ಫ್ ಎಲ್ಲಾ ಜಮೀನು ನನ್ನದೆ ಅಂತ ಹೇಳುತ್ತಿದೆ. ವಿಧಾನಸೌದ ಕೂಡ ವಕ್ಫ್ ಬೋರ್ಡ್ ಅಂತಾ ಮತ್ತೊಬ್ಬ ಸಾಬ್ರು ಹೇಳಿದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಮರು ಈ ದೇಶಕ್ಕೆ ಯಾವಾಗ ಬಂದ್ರಿ? ಚೋಳರು, ಚಾಲುಕ್ಯರ ಕಾಲದಲ್ಲಿ ನೀವಿದ್ರ. ನಮ್ಮ ದೇಶಕ್ಕೆ ಬಂದು ದೇವಾಲಯಗಳು ನಮ್ದು, ರೈತರ ಜಮೀನುಗಳು ನಮ್ದು ಅಂತೀರಾ? ಎಂದು ಪ್ರಶ್ನಿಸಿದರು. ನಾವುಗಳು ಪ್ರತಿಭಟಿಸಲಿಲ್ಲ ಅಂದ್ರೆ ಈ ರಾಜ್ಯದಲ್ಲಿ ಬದುಕಲು ಆಗಲ್ಲ‌.ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ರೀತಿಯ ಈದ್ ಇಂಡಿಯಾ ಕಂಪನಿ ಬಂದಿದೆ. ಬ್ರಿಟಿಷರ ರೀತಿ ಅವರನ್ನು ಓಡಿಸಬೇಕು ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಆರ್​. ಅಶೋಕ್​ ನೋಟೀಸ್​ಗಳನ್ನು ರದ್ದು ಮಾಡಿರೋದಾಗಿ ಸಿಎಂ ಹೇಳಿದ್ದಾರೆ.
ನಾನು ಇಲ್ಲಿಗೆ ಬರ್ತೀನಿ ಅಂತಾ ಗೊತ್ತಾಗಿ, ಪಹಣಿ ಚೇಂಜ್ ಮಾಡಿದ್ದಾರೆ.ಇನ್ಮೇಲೆ ಎಲ್ಲಾ ಕಡೆ ನಮ್ದೆ ಹವಾ.
ನಾವು ಎಲ್ಲೆಲ್ಲಿ ಹೋಗ್ತೀವಿ, ಅಲ್ಲೆಲ್ಲಾ ಚೇಂಜ್ ಆಗಬೇಕು. ಅದರ ವಿರುದ್ಧ ಹೋರಾಟ ಮಾಡಲು ಮಂಡ್ಯದಲ್ಲಿ ಮನೆಗೆ ಒಬ್ಬರಂತೆ ಬಂದು ಒಗ್ಗೂಡಬೇಕು.  ಒಗ್ಗಟ್ಟಾಗದಿದ್ರೆ ಸಿದ್ದಾಮುಲ್ಲಖಾನ್ ಮುಗಿಸಿಬಿಡ್ತಾರೆ ಎಂದು ಸಿಎಂ ಮೇಲೆ ಹರಿಹಾಯ್ದರು.

RELATED ARTICLES

Related Articles

TRENDING ARTICLES