ರಾಜ್ಯದಲ್ಲಿ ಉಪಚುನಾವಣ ಕಣ ರಂಗೇರಿದ್ದು. ಚುನಾವಣೇಗು ಮುನ್ನ ಕಾಂಗ್ರೆಸ್ ಪಕ್ಷದ ಆಂತರಿಕ ಸಮೀಕ್ಷೆ ವರದಿ ಮತ್ತು ಗುಪ್ತಚರ ಸಮೀಕ್ಷೆ ವರದಿ ಕಾಂಗ್ರೆಸ್ ಪಕ್ಷದ ನಾಯಕರ ಕೈ ಸೇರಿದ್ದು. ವರದಿಯನ್ನು ನೋಡಿದ ಸಿಎಂ ಮತ್ತು ಡಿಸಿಎಂ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.
ಹಾಗೂ ಗುಪ್ತಚರ ಕೊಟ್ಟ ರಿಪೋರ್ಟ್
ಚುನಾವಣಾ ಪೂರ್ವ ಸಮೀಕ್ಷೆಯ ಆಂತರಿಕ ವರದಿಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು. ಒಂದು ಕ್ಷೇತ್ರದಲ್ಲಿ ಸೋಲುತ್ತದೆ ಎಂದು ವರದಿಯನ್ನು ನೀಡಲಾಗಿದೆ. ಇ ಬಾರಿಯು ಶಿಗ್ಗಾಂವ್ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸೋತಿದ್ದು. ಕಾಂಗ್ರೆಸ್ ಅಭ್ಯರ್ಥಿ ಸೋಲಲಿದ್ದಾರೆ ಎಂದು ಮಾಹಿತಿ ದೊರೆತಿದೆ.
ಎರಡು ಕ್ಷೇತ್ರದಲ್ಲಿ ಕೂದಲೆಳೆ ಅಂತರದಲ್ಲಿ ಗೆಲುವು ಸಾಧಿಸಲಿದೆ ಕಾಂಗ್ರೆಸ್
ಮೂರು ಕ್ಷೇತ್ರದಲ್ಲಿ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಲಿದೆ ಎಂದು ಮಾಹಿತಿ ದೊರೆತಿದ್ದು. ಚನ್ನಪಟ್ಟಣದಲ್ಲಿ ಈ ಬಾರಿ ಸಿಪಿ ಯೋಗೇಶ್ವರ್ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ವರದಿ ನೀಡಿದ್ದು. ಜಿದ್ದಾಜಿದ್ದಿನ ರಣಾಂಗಣದಲ್ಲಿ ನಿಖಿಲ್ ವಿರುದ್ದ ಸಿಪಿವೈ ಸುಮಾರು 6 ರಿಂದ 7 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇದೇ ರೀತಿ ಸಂಡೂರಿನಲ್ಲಿಯು ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದ್ದು. ಈ ಹಿಂದೆ ತುಕಾರಂ ಅವರಿಗೆ ಇದ್ದ ಬೆಂಬಲ ಈ ಬಾರಿ ಅವರ ಪತ್ನಿಗೆ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ ಎನ್ನಲಾಗಿದೆ. ಆದರೂ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಸುಮಾರು 2ರಿಂದ 3 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ವರದಿಯಾಗಿದೆ.
ವೈಯಕ್ತಿಕವಾಗಿ ಯಾವುದೇ ವರ್ಚಸ್ಸನ್ನು ಹೊಂದಿರದ ಅನ್ನಪೂರ್ಣ ತುಕಾರಂ ಮಾಜಿ ಶಾಸಕ ತುಕಾರಂ ಮತ್ತು ಸಂತೋಶ್ ಲಾಡ್ ಪ್ರಭಾವದಿಂದಲೇ ಗೆಲ್ಲಬೇಕು ಎಂಬ ವಾತವರಣ ಸೃಷ್ಟಿಯಾಗಿದೆ. ಇನ್ನಯ ಬಿಜೆಪಿ ಅಭ್ಯರ್ಥಿಗೆ ಜನಾರ್ಧನ್ರೆಡ್ಡಿ ವಾಪಸಾತಿ ಹೆಚ್ಚು ಬಲ ನೀಡಿದ್ದರೆ ಮತ್ತೊಂದೆಡೆ ಜೆಡಿಎಸ್ ಮತಗಳು ಕೈಕೊಡಲಿದೆ ಎಂದು ವಿಶ್ಲೇಷಿಸಿದ್ದಾರೆ. ಇವೆಲ್ಲದರಿಂದಾಗಿ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಗೆಲ್ಲಲಿದ್ದಾರೆ ಎಂದು ಮಾಹಿತಿ ದೊರೆತಿದೆ.
ಕಾಂಗ್ರೆಸ್ ಆಂತರಿಕ ಸಮೀಕ್ಷೆಯ ವರದಿಯು ಕೈಸೇರುತ್ತಿದ್ದಂತೆ ಸಿಎಂ, ಡಿಸಿಎಂ ಸೇರಿದಂತೆ ಕೆಪಿಸಿಸಿ ನಾಯಕರು ಅಲರ್ಟ್ ಆಗಿದ್ದು. ಮೂರು ಕ್ಷೇತ್ರಗಳಲ್ಲಿ ಕಾಲಿಗ ಚಕ್ರ ಕಟ್ಟಿಕೊಂಡು ಒಡಾಡುತ್ತಿದ್ದಾರೆ. ಹೇಗಾದರು ಮಾಡಿ ಸಂಡೂರು ಮತ್ತು ಚನ್ನಪಟ್ಟಣ ಗೆಲ್ಲಲೆ ಬೇಕು ಎಂದು ಪಣ ತೊಟ್ಟಿರುವ ರಾಜ್ಯ ಕಾಂಗ್ರೆಸ್ಗೆ ಉಪ ಚುನಾವಣೆ ಪ್ರತಿಷ್ಟೆಯ ಕಣವಾಗಿ ಬದಲಾಗಿದೆ.