Tuesday, December 24, 2024

ಗುಜರಾತ್ ಮೂಲದ ಕಾಶ್ ಪಟೇಲ್ CIA ನೂತನ ಮುಖ್ಯಸ್ಥನಾಗುವ ಸಾಧ್ಯತೆ

ನ್ಯೂಯಾರ್ಕ್​ : 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸುವ ಮೂಲಕ ಎರಡನೇ ಬಾರಿ ಅಧ್ಯಕ್ಷಗಾದಿಗೆ ಏರುವ ಸಿದ್ಧತೆಯಲ್ಲಿದ್ದಾರೆ. ಏತನ್ಮಧ್ಯೆ ಟ್ರಂಪ್ ನಿಕಟವರ್ತಿ, ಭಾರತೀಯ ಮೂಲದ ಕಾಶ್ ಪಟೇಲ್ ಗೆ ಅಮೆರಿಕದ ಉನ್ನತ ಗುಪ್ತಚರ ಸಂಸ್ಥೆ ಸಿಐಎನ ಮುಖ್ಯಸ್ಥರಾಗಿ ನೇಮಕ ಮಾಡುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

78 ವರ್ಷದ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವ ಮೂಲಕ 2ನೇ ಬಾರಿ ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ್ದಾರೆ. 538 ಸದಸ್ಯಬಲದ ಅಮೆರಿಕ ಸೆನೆಟ್ ನ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ 295 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದಿದ್ದು, ಕಮಲಾ ಹ್ಯಾರಿಸ್ 226 ಎಲೆಕ್ಟೋರಲ್ ಕಾಲೇಜ್ ಮತ ಗಳಿಸಿದ್ದಾರೆ.

ಅಧ್ಯಕ್ಷಗಾದಿಗೆ ಏರಲು 270 ಮತಗಳ ಅಗತ್ಯವಿದೆ. ನವೆಂಬ‌ರ್ 5ರ ಅಂತಿಮ ಹಂತದ ಚುನಾವಣೆಗೂ ಮುನ್ನವೇ ಡೊನಾಲ್ಡ್ ಟ್ರಂಪ್ ಅವರು ತಮ್ಮ ನೂತನ ಆಡಳಿತದ ಸಂಭಾವ್ಯ ಸಚಿವರು, ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸಿಐಎನ ನೂತನ ಮುಖ್ಯಸ್ಥರನ್ನಾಗಿ ಕಾಶ್ ಪಟೇಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇರುವ ಸುದ್ದಿಗಳು ಹರಿದಾಡುತ್ತಿರುವುದಾಗಿ ವರದಿಯಾಗಿದೆ.

RELATED ARTICLES

Related Articles

TRENDING ARTICLES