Sunday, December 22, 2024

ಅವಳಿ ಕಟ್ಟಡದ ಮೇಲೆ ದಾಳಿ ನಡೆಸಿದ ಉಗ್ರರಿಗೆ ಕ್ಷಮೆ ನೀಡಿದ ಅಮೇರಿಕಾ ಸೇನಾ ನ್ಯಾಯಾಲಯ

ನ್ಯೂಯಾರ್ಕ್​: ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001ರ ಸೆ. 11ರಂದು ಭಯೋತ್ಪಾದಕರು ನಡೆಸಿದ ದಾಳಿಯ ಸಂಚುಕೋರ ಖಾಲಿದ್ ಶೇಖ್ ಮೊಹಮ್ಮದ್ ಹಾಗೂ ಆತನ ಇಬ್ಬರು ಸಹವರ್ತಿಗಳ ಮನವಿ ಒಪ್ಪಂದಗಳನ್ನು ಸೇನಾ ನ್ಯಾಯಾಧೀಶರು ಮಾನ್ಯ ಮಾಡಿದ್ದು, ಮರಣದಂಡನೆಯ ಶಿಕ್ಷೆಯಿಂದ ಇವರು ಪಾರಾಗುವ ಸಾಧ್ಯತೆಗಳಿವೆ.

ಈ ಒಪ್ಪಂದದ ಅಂಶಗಳನ್ನು ಬಹಿರಂಗಗೊಳಿಸದಂತೆ ಆದೇಶಿಸಿದ್ದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ಅವರ ಆದೇಶವನ್ನೂ ನ್ಯಾಯಾಧೀಶರು ರದ್ದುಗೊಳಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 9/11 ಭಯೋತ್ಪಾದಕರ ದಾಳಿಯಲ್ಲಿ ಸುಮಾರು ಮೂರು ಸಾವಿರ ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸಂಚುಕೋರ ಖಾಲಿದ್ ಶೇಖ್ ಮೊಹಮ್ಮದ್ ಹಾಗೂ ಆತನ ಇಬ್ಬರು ಸಹವರ್ತಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

ದೀರ್ಘಕಾಲದಿಂದ ನಡೆಯುತ್ತಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳ ತಪ್ಪೋಪ್ಪಿಗೆ ಮನವಿಯನ್ನು ಪರಿಗಣಿಸಿ ಮರಣದಂಡನೆಯಿಂದ ವಿನಾಯಿತಿ ನೀಡುವ ಕುರಿತು ಸರ್ಕಾರಿ ವಕೀಲರು ಸೇನಾ ಅಟಾರ್ನಿಗಳೊಂದಿಗೆ ಸಂಧಾನ ಮಾತುಕತೆ ನಡೆಸಿದ್ದರು. ಇದನ್ನು ಕ್ಯೂಬಾದ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ಮಿಲಿಟರಿ ಆಯೋಗದ ಉನ್ನತ ಅಧಿಕಾರಿಗಳು ಅನುಮೋದಿಸಿದ್ದರು.

RELATED ARTICLES

Related Articles

TRENDING ARTICLES