ಯಾದಗಿರಿ : ಸರ್ಕಾರಿ ಶಾಲೆಗಿಳಿಗೆ ಅಥಿತಿ ಶಿಕ್ಷಕರು ಬರುವುದು ಸಾಮಾನ್ಯ, ಆದರೆ ಇಲ್ಲೊಬ್ಬ ರೌಡಿಶೀಟರ್ ಸರ್ಕಾರಿ ಶಾಲೆಗೆ ಅಥಿತ ಶಿಕ್ಷಕನಾಗಿ ಬಂದಿದ್ದಾನೆ. ರೌಡಿಶೀಟರ್ ಒಬ್ಬ ಶಿಕ್ಷಕನಾಗಿ ಬಂದಿದ್ದರು ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರಿಂದ ಬಾರೀ ಆಕ್ರೋಶಕ್ಕೆ ಕಾರಣವಾಗಿದೆ.
ರೌಡಿಶೀಟರ್ ಭಾಗಪ್ಪ ಎಂಬುವವನು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಥಿತಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು. ಹಿಂದಿ ಭಾಷಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಈತ ನೀಡುವ ಉಪಟಳಕ್ಕೆ ಶಾಲೆಯ ಉಳಿದ ಶಿಕ್ಷಕರು ವರ್ಗಾವಣೆ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ. ರೌಡಿ ಭಾಗಪ್ಪ ನಿತ್ಯವು ಕುಡಿದು ವಿಧ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಅತಿಥಿ ಶಿಕ್ಷಕನಾಗುವುದಕ್ಕೂ ಮೊದಲೇ ಭಾಗಪ್ಪನ ಮೇಲೆ ರೌಡಿ ಶೀಟರ್ ಓಪನ್ ಆಗಿದ್ದು. 2017ರಲ್ಲಿಯೆ ಇವನನ್ನು ರೌಡಿಶೀಟರ್ ಎಂದು ಘೋಷಿಸಿದ್ದಾರೆ. ಈತನ ವಿರುದ್ದ ಗ್ರಾಮದ ಸಾರ್ವಜನಿಕ ಗ್ರಂಥಾಲಯ ಮೇಲ್ವಿಚಾರಕ ಶಿವಪ್ಪ ನಾಯ್ಕೋಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು. ತಕ್ಷಣವೆ ಸೇವೆಯಿಂದ ವಜಾಗೊಳಿಸುವಂತೆ ಕೋರಿದ್ದಾರೆ.