Sunday, December 22, 2024

ಕುಮಾರಸ್ವಾಮಿ ಮತ್ತು ಪುತ್ರನ ವಿರುಧ್ದ FIR ದಾಖಲು

ಬೆಂಗಳೂರು : ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ವಿರುಧ್ದ ಎಫ್​​ಐಆರ್​ ದಾಖಲಾಗಿದ್ದು. ಐಪಿಎಸ್​​ ಆಧಿಕಾರಿ ಚಂದ್ರಶೇಖರ್​ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕುಮಾರಸ್ವಾಮಿ ಸೇರಿದಂತೆ ಮೂರು ಜನರ ವಿರುಧ್ದ ಪ್ರಥಮ ವರ್ತಮಾನ ವರದಿ ದಾಖಲಾಗಿದೆ(FIR).

ಕಳೆದ ತಿಂಗಳು ಲೋಕಾಯುಕ್ತ ವಿಚಾರಣೆ ಎದುರಿಸಿದ್ದ ಕುಮಾರಸ್ವಾಮಿ ನಂತರ ಸುದ್ದಿಗೋಷ್ಟಿ ಮಾಡಿ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್​ ವಿರುದ್ದ ಆರೋಪಗಳ ಸುರಿಮಳೆ ಸುರಿಸಿದ್ದರು. ಇದರಿಂದ ಬೇಸತ್ತಿದ್ದ ಎಡಿಜಿಪಿ  ತಮ್ಮ ಸಿಬ್ಬಂದಿ ವರ್ಗಕ್ಕೆ ಪತ್ರಬರೆದು ಇಂತಹ ಆರೋಪಗಳಿಗೆ ಕಿವಿಕೊಡದೆ ಕೆಲಸ ಮಾಡಿ ಎಂದು ಹೇಲಿದ್ದರು ಅದರ ಜೊತೆಗೆ ಬರ್ನಾಡ್​​ ಷಾ ಹೇಳಿರುವ ವಾಕ್ಯವನ್ನು ಉಲ್ಲೇಖಿಸುವ ಮೂಲಕ ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಕೆ ಮಾಡಿದ್ದರು. ಇದಕ್ಕೆ ರಾಜ್ಯ ಬಿಜೆಪಿ ಮತ್ತು ಜೆಡಿಎಸ್​​ ನಾಯಕರು ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದರು.

ಇದೇ ವಿಚಾರಕ್ಕೆ ಇಂದು ಐಪಿಎಸ್​ ಅಧಿಕಾರಿ ಚಂದ್ರಶೇಖರ್​ ಸಂಜಯ್​ನಗರ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು. ತಮ್ಮ ಎಫ್​ಆರ್​ನಲ್ಲಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್​​ ಮತ್ತು ಸುರೇಶ್​ಬಾಬು ಎಂಬುವವರು ನನಗೆ ಬೆದರಿಕೆ ಹಾಕಿದ್ದಾರೆ, ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದಾರೆ ಹಾಗೂ ಲಂಚ ಪಡೆದ ಆರೋಪ ಮಾಡಿದ್ದಾರೆ ಎಂದು ಪ್ರಕರಣ ದಾಕಲು ಮಾಡಿಕೊಂಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಸಂಜಯ್​​ನಗರ ಪೋಲಿಸರು ಕುಮಾರಸ್ವಾಮಿ, ನಿಖಿಲ್​​ಕುಮಾರ್​ಸ್ವಾಮಿ ಮತ್ತು ಕುಮಾರಸ್ವಾಮಿ ಆಪ್ತ ಸುರೇಶ್​ಬಾಬುರನ್ನ ಆರೋಪಿಗಳನ್ನಾಗಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES