Wednesday, January 22, 2025

ಹೆಂಡತಿ ಮುಂದೆ ʼಅಂಕಲ್ʼ ಎಂದು ಕರೆದಿದ್ದಕ್ಕೆ ಅಂಗಡಿಯಾತನನ್ನು ಥಳಿಸಿದ ವ್ಯಕ್ತಿ

ಭೋಪಾಲ್​ : ಪತ್ನಿ ಮುಂದೆ ʼಅಂಕಲ್ʼ ಎಂದು ಸಂಬೋಧಿಸಿ ಕರೆದಿದ್ದಕ್ಕೆ ವ್ಯಕ್ತಿಯೊಬ್ಬ ಅಂಗಡಿಯಾತನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲನಲ್ಲಿ ನಡೆದಿದೆ.ಈ ಕುರಿತು ಭೋಪಾಲ್​ನ ಜತ್ಖೇಡಿ ಪ್ರದೇಶದಲ್ಲಿ ಸೀರೆ ಅಂಗಡಿಯನ್ನು ಹೊಂದಿರುವ ವಿಶಾಲ್ ಶಾಸ್ತ್ರಿ ಎನ್ನುವಾತ ಪೊಲೀಸರಿಗೆ ದೂರು ನೀಡಿದ್ದಾನೆ.

ಆರೋಪಿ ರೋಹಿತ್ ಎಂಬಾತ ವಿಶಾಲ್ ಅಂಗಡಿಗೆ ತನ್ನ ಪತ್ನಿಯೊಂದಿಗೆ ಸೀರೆ ಖರೀದಿಸಲು ಬಂದಿದ್ದ. ದಂಪತಿ ದೀರ್ಘಕಾಲದವರೆಗೆ ಹಲವಾರು ಸೀರೆಗಳನ್ನು ನೋಡಿದ್ದಾರೆ ಆದರೆ ಯಾವುದನ್ನೂ ಆಯ್ಕೆ ಮಾಡಲಿಲ್ಲ. ಇದೇ ಸಮಯದಲ್ಲಿ ವಿಶಾಲ್ ರೋಹಿತ್​ಗೆ ಯಾವ ಬೆಲೆಯ ಸೀರೆಗಳನ್ನು ಖರೀದಿಸಲು ಬಯಸುತ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ರೋಹಿತ್ 1000 ರೂ. ರೇಂಜ್ ನಲ್ಲಿ ತೋರಿಸಿ ಎಂದಿದ್ದಾರೆ. ಆದರೆ ಅದಕ್ಕಿಂ ತ ಹೆಚ್ಚು ಬೆಲೆಬಾಳುವ ಸೀರೆಯನ್ನು ಸಹ ಖರೀದಿಸಬಹುದು ಎಂದು ವಿಶಾಲ್ ಹೇಳಿದ್ದಾರೆ.
ಇದೇ ವೇಳೆ ವಿಶಾಲ್, “ಅಂಕಲ್, ನಾನು ನಿಮಗೆ ಬೇರೆ ರೇಂಜ್ ಗಳಲ್ಲಿಯೂ ಸೀರೆಗಳನ್ನು ತೋರಿಸುತ್ತೇ ನೆ” ಎಂದಿದ್ದಾರೆ. ಇದನ್ನು ಕೇಳಿಕೆರಳಿದ ರೋಹಿತ್, ನನ್ನನ್ನು ಮತ್ತೆ ʼಅಂಕಲ್ʼ ಎಂದು ಕರೆಯಬೇಡಿ ಎಂದಿದ್ದು ಇದೇ ವಿಚಾರಕ್ಕೆ ಇಬ್ಬರ ನಡುವೆ ದೊಡ್ಡದಾಗಿಯೇ ವಾಗ್ವಾದ ನಡೆದಿದೆ.

ಇದಾದ ಬಳಿಕ ರೋಹಿತ್ ಅಂಗಡಿಯಿಂದ ಹೊರಬಂದಿದ್ದಾರೆ. ಸ್ವಲ್ಪ ಸಮಯದ ನಂತರ ಕೆಲ ಸ್ನೇಹಿತರೊಂದಿಗೆ ರೋಹಿತ್ ವಿಶಾಲ್ ಅಂಗಡಿಗೆ ಮತ್ತೆ ಬಂದಿದ್ದು, ಅವನನ್ನು ಅಂಗಡಿಯಿಂದ ರಸ್ತೆಗೆ ಎಳೆದುಕೊಂಡು ಹೋಗಿ ದೊಣ್ಣೆ, ಬೆಲ್ಟ್ಗಳಿಂದ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ವಿಶಾಲ್ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಶೀಘ್ರದಲ್ಲಿ ರೋಹಿತ್ ಹಾಗೂ ಸ್ನೇಹಿತರನ್ನು ಬಂಧಿಸಲಾಗುವುದೆಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES