Wednesday, December 18, 2024

ಬಾಲಕಿಯರಿಗೆ ಕಿರುಕುಳ ಆರೋಪ : ಪೋಲಿ ಪೋಲಿಸಪ್ಪನಿಗೆ ಧರ್ಮದೇಟು

ಹುಬ್ಬಳ್ಳಿ : ಬೇಲಿಯೆ ಎದ್ದು, ಹೊಲ ಮೆಯ್ದಂತೆ ಎಂಬ ಗಾದೆಯೆಂತೆ ಇಲ್ಲೊಬ್ಬ ಪೋಲಿಸಪ್ಪ ರಕ್ಷಣೆ ಮಾಡುವ ಜಾಗದಲ್ಲಿ ನಿಂತುಕೊಂಡು ತಾನೇ ಬಾಲಕಿಯರಿಗೆ ಲೈಂಗಿಕವಾಗಿ ಕಿರುಕುಳ ಕೊಟ್ಟು, ಸಾರ್ವಜನಿಕರಿಂದ ಹೊಡೆತ ತಿಂದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಶಬರಿನಗರದಲ್ಲಿ ಪೋಲಿಸ್​ ಹೆಡ್​ಕಾನ್ಸ್​ಟೇಬಲ್​ ಬಾಲಕಿಯರಿಗೆ ಕಿರುಕುಳ ನೀಡಿದ್ದು. ಪೋಲಿಯಾಟ ಆಡಿದ ಪೋಲಿಸಪ್ಪನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಎಮ್ ಎ ಖಾದೀಮನವರ ಎಂಬ ವ್ಯಕ್ತಿ ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದನು. ಈತ ಅಕ್ಕಪಕ್ಕದಲ್ಲಿ ವಾಸವಿದ್ದ ಬಾಲಕಿಯರೊಂದಿಗೆ ಅನುಚಿತವಾಗಿಬ ವರ್ತಿಸುತ್ತಿದ್ದ ಹಿನ್ನಲೆ ಸಾರ್ವಜನಿಕರು ನಡುರಸ್ತೆಯಲ್ಲಿಯೆ ಕಾನ್ಸ್ಟೇಬಲ್​ನನ್ನು ಹಿಗ್ಗಾಮುಗ್ಗಾ ತಳಿಸಿದ್ದಾರೆ.

ಬಟ್ಟೆಗಳೆಲ್ಲ ಹರಿಯುವ ಹಾಗೆ ಸಾರ್ವಜನಿಕರು ಹಲ್ಲೆ  ನಡೆಸಿದ್ದು. ನಂತರ ಪೋಲಿ ಪೋಲಿಸಪ್ಪನನ್ನು ಕೇಶ್ವಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಕೇಶ್ವಾಪುರ ಠಾಣೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES